ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವ ತೀಪರಿಣಯಂ ನಾರದಂ-ಮಿತ್ರನೆ ! ಕಾಮೋದ್ದೀಪಕಗಳಾದ ಈ ಸನ್ನಿವೇಶಗಳನ್ನು ನೋ ಡುತಿದ್ದಷ್ಟೂ ಮನಸ್ಸು ಕೆಟ್ಟು ಹೋಗುವುದು, ಇವೆಲ್ಲವೂ ನಮ್ಮ ವಿರಕ್ತಿಮಾರ್ಗಕ್ಕೆ ಪ್ರತಿಬಂಧಕಗಳು, ಇವುಗಳನ್ನು ನೋಡು ತ್ರಿರಬಾರದು. ಬಾ ! ಮುಂದಿನ ಕಾಠ್ಯವನ್ನು ನೋಡುವೆವು. (ಸ್ವಲ್ಪ ಮುಂದೆ ಹೋಗಿ) ಆಹಾ ! ಈ ಕಮಲಸರೋವರದಲ್ಲಿ ಚಕ್ರವಾಕಪಕ್ಷಿಯು, ಆಗಾಗ ತನ್ನ ಪ್ರಿಯೆಯನ್ನು ಮುದ್ದಿಸು ತ್ಯ, ಎಷ್ಟು ಸಂತೋಷದಿಂದಿರುವುದು ನೋಡು ! ಪರ್ವತಂ-ನಾನೂ ಅದನ್ನೇ ನೋಡುತ್ತಿರುವೆನು. ಛೇ ! ವಿರಕ್ತರಾದ ನ ಮಗೆ ಇವುಗಳಿಂದೇನು! ಮುಂದೆ ಬಾ ! (ಮುಂದೆ ಹೋಗಿ) ಮಿ ತ್ರನೆ ! ಈ ಲತಾಗೃಹವನ್ನು ನೋಡಿದೆಯಾ! ಇಲ್ಲಿ ಸ್ತ್ರೀಸಮೇ ತರಾಗಿ ವಿಹರಿಸತಕ್ಕವರು ಎಷ್ಟು ಧನ್ಯರೋ ! ನಾರದಂ-ಅಂತವರು ಪರಮಭಾಗ್ಯಶಾಲಿಗಳೆಂಬುದನ್ನು ಕೇಳಬೇಕೆ ? - (ಹಿಂದಿನಿಂದ ರಾಜನು ಪ್ರವೇಶಿಸುವನು.) ರಾಜಂ-ಪೂಜ್ಯರೆ ! ಇತ್ತ ದಯೆಮಾಡಿಸಿ ಈ ಪೀಠವನ್ನಲಂಕರಿಸಬೇಕು - (ನಾರದಪರ್ವತರಿಬ್ಬರೂ ಕುಳ್ಳಿರುವರು. ರಾಜಂ-(ಶ್ರೀಮತಿಯನ್ನು ಕರೆದು ಕುಮಾರೀ ! ಇದೋ ! ಲೋಕಪೂ ಜ್ಯರಾದ ನಾರದಪರ್ವತರಿಬ್ಬರೂ ನಮ್ಮ ಭಾದ್ರೋದಯದಿಂದ ನಿನ್ನ ಪ್ರತಸಮಾಪ್ತಿ ಕಾಲಕ್ಕೆ ಸರಿಯಾಗಿ ಅತಿಥಿಗಳಾಗಿ ಬಂದಿ ರುವರು. ಇವರ ಪಾದಾಭಿವಂದನವನ್ನು ಮಾಡಿ, ಅವರ ಅಮೋ ಫುವಾದ ಆಶೀರ್ವಾದಕ್ಕೆ ಪಾತ್ರಳಾಗು ! ರಾಜಂ-ಪೂಜ್ಯರೆ ! ಈಕೆಯೇ ನನ್ನ ಮಗಳು ! ಅನುಗ್ರಹಿಸಬೇಕು. ನಾರದಂ-ಕುಮಾರೀ ! ಉತ್ತಮಪತಿಯನ್ನು ಹೊಂದುವಳಾಗು. ಕವತಂ-ದೀರ್ಘಸುಮಂಗಲೀ ಭವ ! (ಕೈಯೆತ್ತಿ ಆಶೀರ್ವದಿಸುವರು.) - (ಶ್ರೀಮತಿಯು ಎದ್ದು ನಿಂತಮೇಲೆ, ನಾರದಪರ್ವತರಿಬ್ಬರೂ ಅವಳ ಈ ರೂಪಾತಿಶಯವನ್ನು ನೋಡಿ ಬೆರಗಾಗುವರು) ಹರ್ವತಂ-(ಸ್ವಗತಂ) ಆಹಾ ! ಏನೀ ಅದ್ಭುತಸೌಂದಠ್ಯವು !