ತೃತೀಯಾಂಕಂ, ಕ೦ | ಇವಳೇಂ ಮನ್ಮಥರಾಜನ ನವಮೋಹನಮಂತ್ರವಿದ್ಯೆಯೊ!ಮಾನವರ ಪವನಾಂತ ವಿಷ್ಣು ಮಾಯೆಯೊ! ಭುವನತ್ರಯಭಾಗ್ಯಲಕ್ಷ್ಮಿ ಯೋ! ನಾನರಿಯೆಂ। ಇವಳ ರೂಪಲಾವಣ್ಯಗಳನ್ನು ನೋಡಿದರೆ ಸಾಮಾನ್ಯ ಮನುಷ್ಯ ಸ್ತ್ರೀಯಂತೆ ತೋರುವುದಿಲ್ಲ ! ಆಹಾ!ಇವಳ ಅಸಾಧಾರಣಸಂದ ಕ್ಯವು ನನ್ನ ಮನಸ್ಸನ್ನೂ ಮೋಹಪಾಶದಲ್ಲಿ ಕಟ್ಟಿಡುವಂತೆ ತೋ ರುವುದಲ್ಲಾ! ಆದರೇನು ? ಇರಲಿ ! ಕಾಲವಶದಿಂದ ಎಂತಹ ವಿರಕ್ತರಿಗಾದರೂ ಮನಸ್ಸು ಕೆಲಗುವುದುಂಟು ! ಅಂತಹ ಸ್ಥಿತಿಯಲ್ಲಿಯೂ ಇಂದ್ರಿಯಚಾಪಲ್ಯಕ್ಕೊಳಗಾಗದಂತೆ ಮನಸ್ಸ ನ್ನು ತಡೆದಿಡುವುದೇ ಜಿತೇಂದ್ರಿಯರ ಲಕ್ಷ ಇವಲ್ಲವೆ ? ಇದಕ್ಕಾಗಿ ಧೈಯ್ಯಗೆಡ ಬಾರದು, (ಪ್ರಕಾಶಂ ರಾಜೇಂದ್ರ: ಈಕೆಯೇ ನಿನ್ನ ಮಗಳೆ ? ರಾಜ೦-ಪೂಜ್ಯರೆ ! ಹೌದು ! ಇವಳೇ ನನ್ನ ಮಗಳು. ನಾರದ೦- ಅವಳ ರೂಪಕ್ಕೆ ಬೆರಗಾಗಿ ಆಶ್ಚಯ್ಯಪಡುತ್ತ) ರಾಟಾ! ಇವಳಿ ಗಾಗಿಯೇ ನಿನ್ನ ವರಾನ್ವೇಷಣಪ್ರಯತ್ನ ವಲ್ಲವೆ ? ರಾಜಂ-ಹೌದು ! ಇವಳಿಗಾಗಿಯೇ ? ನಾರದಂ-ರಾಜಾ! ನೀನು ಈ ಕಳ್ಳಿಗೆ ತಕ್ಕ ವರಸಿಲ್ಲವೆಂದು ಚಿಂತಿಸುವುದು ಯುಕ್ತವೇ ! ಇವಳ ರೂಪಲಾವಸಂಪತ್ತಿಯನ್ನು ನೋಡಿದ ರೆ, ಈ ಭೂಲೋಕದಲ್ಲಿಯಾಗಲಿ, ಕೊನೆಗೆ ದೇವಲೋಕದಲ್ಲಿ ಯಾಗಲಿ, ಇವಳಿಗೆ ಅನ್ವರೂಪನಾದ ವರನು ಸಿಕ್ಕಲಾರನೆಂದೇ ನನಗೂ ತೋರುವುದು, ಅಷ್ಟೇಕೆ ! ವೃ! ಅನುಪಮದಿವ್ಯಮೂರ್ತಿ: ಶುಭಕೀರ್ತಿ! ಸುರಾಸುರಚಕ್ರವರ್ತಿಯೆಂ। ದೆನೆ ನೆಗಳ ಮಹಾಪ್ರರುಷನಲ್ಲದೆ,ಲೋಕದೊಳನ್ನ ಪೂರುಷರ<! ತನುಜೆಯಿರಕ್ಕೆ ತಕ್ಕ ವರ ಸಾಮ್ಯಮನೊಂದುವರಿಲ್ಲ! ನಿಶ್ಚಯಂ। ಮನದನುಮಾನವಿಲ್ಲದೆ! ಬಿಡಿನ್ನು ವರಾನಯನಪ್ರಯತ್ನ ಮಂ ||
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.