ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಶ್ರೀಮತೀಸರಿಣಯಂ ಪಕ್ವತಂ-ಹೌದು! ನಿಜ ! ನನಗೂ ಹಾಗೆಯೇ ತೋರುವುದು. ರಾಜಂ-ಪೂಜ್ಯರೆ ! ನಾನು ಆಗಲೇ ಆ ಪ್ರಯತ್ನ ವನ್ನು ಬಿಟ್ಟು, ದೈವ ಸಂಕಲ್ಪವಿದ್ದಂತಾಗಲೆಂದು ಭಗವಂತನಮೇಲೆ ಭಾರವನ್ನಿಟ್ಟು, ಸುಮ್ಮನಿರುವೆನು ! ಹಾಗಿದ್ದರೂ ಲೋಕಪದ್ಧತಿಯನ್ನನುಸರಿಸಿ, ಕನೈಯರಿಗೆ ಅನುರೂಪನಾದ ವರನನ್ನು ಹುಡುಕಿ ವಿವಾಹಕಾ ರವನ್ನು ನಿರಹಿಸತಕ್ಕ ಭಾರವು, ತಾಯಿತಂದೆಗಳಮೇಲೆ ಬಿದ್ದಿ ರುವುದರಿಂದ, ಅವಳ ವಿವಾಹಚಿಂತೆಯು ನನ್ನ ನ್ನು ಬಿಡದೆ ಬಾಥಿ ಸುತ್ತಿರುವದು. ನಾರದಂ-ಹೌದು ! ಅದೇನೋ ವಾಸ್ತವವೇ ! ಹಾಗಿದ್ದರೂ ನೀನು ಇದಕ್ಕಾಗಿ ಚಿಂತಿಸಿ ಕೊರಗುವುದರಿಂದ ಫಲವೇನು ? ರಾಜೇಂ ದ್ರಾ ! ಇವಳು ನಿನ್ನ ಗರ್ಭದಲ್ಲಿ ' ಹುಟ್ಟಿದ್ದರೂ, ಯಾವಳೋ ದೇವಾಂಶದವಳಾಗಿರಬೇಕೇಹೊರತು ಮನುಷ್ಯಕಯಂತೆ ನನ್ನ ಮನಸ್ಸಿಗೆ ತೋರಲಿಲ್ಲ ! ಏಕೆಂದರೆ. ರಾಗ: ಕಲ್ಯಾಣಿ-ರೂಪಕತಾಳ ಲೋಕಮೋಹನೆಯೇ | ಮಾನಿನೀ ಮನೋಹಾರಿಣಿ | ನಾಕಲೋಕದ ನಾರಿಯೋ | ನಾಗಕನೆಯೊ ಲೋಕ||| ಸರಸಿಜಾತಃಸದೃಶನೇತ್ರೆ 1 ಸರಸಕೋಮಲ ಮಂಜುಗಾತ್ರಿ | ನಿರುಪಮಲಾವಣ್ಯಮೂರ್ತಿ | ನೀರೆ ನೀರಜಾನನೆ| ೨ | ಕುಂದಕುಟ್ಟ ಲಾಭರದನೆ | ಮಂದಹಾಸ]ರುಚಿರವದನೆ | ಸುಂದರೀಮಣಿ!ರತಿಯರೂಪವ | ಕುಂದುಗೊಳಿಪ ಚಂದದಿಂದಲಿ ||೩|| ಆದುದರಿಂದ ಓ ರಾಜೇಂದ್ರಾ ! ನಿನ್ನ ಭಾಗ್ಯ ಪರಿಪಾಪವೇ ಈ ಕನ್ಯಾರೂಪದಿಂದ ಹುಟ್ಟಿರಬೇಕೇಹೊರತು ಬೇರೆಯಲ್ಲ ! ರಾಜಂ-ಪೂಜ್ಯರೆ : ಇವೆಲ್ಲವೂ ತಮ್ಮಂತಹ ಮಹಾತ್ಮರ ಅನುಗ್ರಹವಿಶೇ ಷವೆಂದೇ ಭಾವಿಸುವೆನು. ರಾಜಪತ್ನಿ-ಲೋಕೋತ್ತರಸೌಂದರವುಳ್ಳ ದೇವಾಂಗನೆಯರ ರೂಪವ ನ್ಯೂ ಕೇವಲಹೇಯವಾಗಿ ಭಾವಿಸುತ್ತಿರುವ ನಿಮ್ಮಿಂದ, ಈ ನಮ್ಮ