ತೃತೀಯಾಂಕ೦. ೪ ಕುಮಾರಿಯು ಇಷ್ಟು ಪ್ರಶಂಸಾರ್ಹಳಾದಮೇಲೆ,ಇವಳು ಪರಮ ಭಾಗ್ಯವತಿಯೆಂಬುದರಲ್ಲಿ ಸಂದೇಹವೇನಿದೆ? ನಾರದಂ(ಭಯದಿಂದ ತನ್ನಲ್ಲಿ ತಾನು ಆಯ್ಯೋ ! ಇದೇನು ? ಈ ಕನ್ನಿ ಕೆಯ ರೂಪಕ್ಕೆ ಮರುಳಾಗಿ, ನನ್ನನ್ನೇ ನಾನು ಮರೆತುಹೋದೆನ ಲ್ಲಾ ! ನಿಜವಾಗಿಯೂ ಈ ಕತ್ಯೆಯ ರೂಪಲಾವಣ್ಯಗಳು ನನ್ನ ಮನಸ್ಸನ್ನು ಕಲಗಿಸಿ ಬಿಟ್ಟುವು. ಹೀಗೆಯೇ ಪ್ರಸ್ತಾವವಶದಿಂದ. ನನ್ನ ಮನೋಭಿಪ್ರಾಯವು ಬಾಯಿಂದ ಹೊರಬಿದ್ದರೆ, ಆಗ ನಾ ನು ಇವರಮುಂದೆ ಕೇವಲ ಹಾಸ್ಯಾಸ್ಪದನಾಗುವೆನು, ಬೇರೆ ಯಾವುದಾದರೂ ವ್ಯಾಜಾಂತರದಿಂದ ಅದನ್ನು ಮರೆಸುವೆನು. (ಪ್ರಕಾಶಂ)-ರಾಜೇಂದಾ ! ಅದು ಹಾಗಿರಲಿ ! ದೇವಾಂಗನೆಯರ ಹೆಸರ ನ್ನೆ ತಿದುದರಿಂದ ನೆನಪಿಗೆ ಬಂದಿತು, ನಾನು ನಿನಗೆ ಅವಶ್ಯವಾಗಿ ತಿಳಿಸಬೇಕೆಂದು ಬಂದ ಒಂದು ವೃತ್ತಾಂತವನ್ನು ಮರೆತಿದ್ದೆನು. ಈಗಲೇ ನಾನು ದೇವಸಭೆಯಿಂದ ಬರುವಾಗ,ಅಲ್ಲಿ ನಡೆದ ಒಂದು. ಅಕ್ರಮವನ್ನು ನೋಡಿ,ನನ್ನ ಮನಸ್ಸಿಗೆ ಬಹಳ ಅಸಮಾಧಾನವಾ. ಯಿತು, ಕುಲ, ರೂಪ, ಯಾವನ, ಧನಸಂಪತ್ತಿ, ಪ್ರಭುತ್ವ, ಮುಂತಾದ ವೈಭವಗಳಲ್ಲಿ ಯಾವುದೊಂದಿದ್ದರೂ, ಮನುಷ್ಯನಿ ಗೆ ವಿವೇಕಜ್ಞಾನವನ್ನು ಕೆಡಿಸಿ, ಅವನನ್ನು ಉನ್ಮಾರ್ಗದಲ್ಲಿ ಪ್ರವ ರ್ತಿಸುವಂತೆ ಮಾಡುವುದು ಸಹಜವು! ಈ ಸಮಸ್ತಭಾಗ್ಯಗಳೂ ನಿನ್ನಲ್ಲಿ ಒಂದಾಗಿ ಕಲೆತಿರುವಾಗಲೂ, ನೀನು ಸನ್ಮಾರ್ಗವನ್ನು ಬಿಡದೆ ಜಿತೇಂದ್ರಿಯನಾಗಿ, ಕೇವಲ ವಿಷ್ಣು ಭಕ್ತಿಪರಾಯಣನಾ ಗಿರುವುದು ಎಂತವರಿಗೂ ಆಶ್ಚರೈವನ್ನುಂಟುಮಾಡದಿರಲಾರದು. ಪರತಂ-ಇದರಮೇಲೆ, ರೂಪಲಾವಣ್ಯಗಳಿಂದ ಲೋಕಮೋಹನೆಯಾದ ಇಂತಹ ಕನ್ಯಾರತ್ನವು ಭಾಗ್ಯಲಕ್ಷ್ಮಿಯಂತೆ ಮನೆಯಲ್ಲಿ:- (ಎಂದು ಅರ್ಧೋಕ್ಕಿಯಲ್ಲಿ ಭಯದಿಂದ ತನ್ನಲ್ಲಿ ತಾನು.) ಆಹಾ ! ಇದೇನು!ಅಸಂದರ್ಭವಾಗಿ ನಾನು ಈಕೆಯ ರೂಪವನ್ನು ವರ್ಣಿ
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.