ಈ ಪುಟವನ್ನು ಪ್ರಕಟಿಸಲಾಗಿದೆ

2

ಹೇಳುವ ಹಾಗಿಲ್ಲ. ಇದಕ್ಕಾಗಿ ನಾವು ಅವರಿಗೆ ಬಹಳವಾಗಿ ಕೃತಜ್ಞರಾಗಿರುವೆವು.

ಜ್ಞಾನಸಂಪಾದನೆಗೆ ಸತ್ಸಂಗವೇ ಮುಖ್ಯ ಸಾಧನವೆಂದು ಕೇಳಿದ್ದೇವೆ. ರಾಮಕೃಷ್ಣ ಪರಮಹಂಸರಂಥ ಮಹಾನುಭಾವರ ಸಂಗವು ಲಭಿಸದಿದ್ದ ಪಕ್ಷದಲ್ಲಿ ಅವರ ಚರಿತಾಮೃತ ಶ್ರವಣ ಉಪದೇಶ ಮನನ ಇವುಗಳಿಂದ ಬಹುಮಟ್ಟಿಗೆ ಅವರ ಸಂಗಫಲವನ್ನು ಪಡೆಯಬಹುದು. ಆದರೆ ನಮ್ಮಂಥ ಅಲ್ಪಮತಿಗಳಿ೦ದ ರಚಿತವಾದ ಈ ಸಣ್ಣ ಪುಸ್ತಕವನ್ನು ಓದಿ ಪಾಠಕರು ಪರಮಹಂಸರ ವಿಚಾರಗಳೆಲ್ಲವೂ ತಿಳಿದುವೆಂದೂ ಅವರ ಮಾಹಾತ್ಮವು ಇಷ್ಟೇಯೆಂದೂ ನಿರ್ಧರಿಸಲಾಗದು. ಏಕೆಂದರೆ ಅವರ ವಿಚಾರವಾಗಿ ಸುಮಾರು ೧೨೦೦ ಪುಟಗಳುಳ್ಳ ಗ್ರಂಥವನ್ನು ಓದಿದ್ದರೂ ಅವರ ಜೀವನದಸಂಗತಿಗಳನ್ನೆಲ್ಲ ತಿಳಿದುಕೊಂಡಿದೇವೆಂಬ ನಂಬುಗೆಯು ನಮಗೇ ಹುಟ್ಟಲೊಲ್ಲದು. ಆದ್ದರಿಂದ 'ಶ್ರೀರಾಮಕೃಷ್ಣ ಲೀಲಾಪ್ರಸಂಗ','ಶ್ರೀರಾಮಕೃಷ್ಣ ಕಥಾಮೃತ' ಮುಂತಾದ ಗ್ರಂಥಗಳನ್ನು ಕನ್ನಡಿಗರು ಓದಬೇಕೆಂದು ಪ್ರಾರ್ಥಿಸುವೆವು. ಈ ಗ್ರಂಥಗಳಲ್ಲಿ ಶ್ರೀ ರಾಮಕೃಷ್ಣ ಕಥಾಮೃತದ ಸ್ವಲ್ಪ ಭಾಗವು ಇಂಗ್ಲೀಷಿಗೆ ತರ್ಜಮೆಯಾಗಿ “The Gospel of Sri Ramakrishna"ಎಂಬ ಹೆಸರಿನಿಂದ ಪ್ರಕಟವಾಗಿದೆ. ಶ್ರೀರಾಮಕೃಷ್ಣ ಲೀಲಾಪ್ರಸಂಗವು ಇನ್ನೂಇಂಗ್ಲಿಷಿಗೆ ತರ್ಜಮೆಯಾಗಿಲ್ಲ. ಸದ್ಯಕ್ಕೆ ಆಗುವ ಸಂಭವವೂಇಲ್ಲ. ಆದರೆ ನಾವು ಅದನ್ನೇಕೆ ಕಾದುಕೊಂಡಿರಬೇಕು? "ಸುಲಿದಬಾಳೆಯ ಹಣ್ಣಿನಂದದಿ……" ಇರುವ ನಮ್ಮ ಕನ್ನಡನುಡಿಯಲ್ಲಿಯೇ ಅವನ್ನು ಏಕೆ ಓದಬಾರದು? ಭಕ್ತಶಿರೋಮಣಿಗಳಉದಾರಾಶ್ರಯವು ದೊರೆತರೆ ಈ ಗ್ರಂಥಗಳನ್ನೂ ವಿವೇಕಾನಂದಸ್ವಾಮಿಗಳು ಶಿಷ್ಯರೊಡನೆ ಮಾಡಿದ ಸಂಭಾಷಣೆಗಳನ್ನೂ, ಧರ್ಮವೀರರಾದ ಆಚಾರ್ ಪುರುಷರ ಚರಿತ್ರೆಗಳನ್ನೂ ಧಾರಾವಾಹಕವಾಗಿ ಮಾಸಪತ್ರಿಕೆಯ ರೂಪದಲ್ಲಿ ಕನ್ನಡಿಸಿ ಸಮರ್ಪಿಸಬೇಕೆಂಬ ಉದ್ದೇಶ