ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೪೯

ಈ ಪುಟವನ್ನು ಪ್ರಕಟಿಸಲಾಗಿದೆ
೩೩
ಚರಿತ್ರೆ

ಆಗ್ಗಾಗ್ಗೆ ಹೋಗಿಬರುತ್ತಿದ್ದು ತನ್ನ ಮಾತೃಭಾಷೆಯಲ್ಲಿ ಬರೆದ ಅಥವಾ ಅಚ್ಚು ಹಾಕಿದ ಯಾವ ಪುಸ್ತಕವನ್ನು ಕೊಟ್ಟರೂ ಚೆನ್ನಾಗಿ ಓದುವ ಮಟ್ಟಿಗೆ ಕಲಿತು ಕೊಂಡನು. ಅದರಲ್ಲಿಯೂ ರಾಮಾಯಣ ಮಹಾಭಾರತಾದಿ ಗ್ರಂಥಗಳನ್ನು ಭಕ್ತಿ ಪೂರ್ವಕವಾಗಿಯೂ ಬಲುಸೊಗಸಾಗಿಯೂ ಓದಬಲ್ಲವನಾಗಿದ್ದನು. ಇದನ್ನು ಕೇಳಿ, ಆ ಗ್ರಾಮದ ಜನರು ಆನಂದದಲ್ಲಿ ಮುಳುಗಿ ಹೋಗುತ್ತಿದ್ದರು. ಆಗ್ಗಾಗ್ಗೆ ಅನೇಕರು ಅವನನ್ನು ತಮ್ಮಮನೆಗೆ ಕರೆಸಿಕೊಂಡು ಪ್ರಹ್ಲಾದ ಚರಿತ್ರೆ, ಧ್ರುವೋಪಾಖ್ಯಾನ ಮುಂತಾದ ಕಥೆಗಳನ್ನು ಓದಿಸಿ, ಕೇಳಿ, ಆನಂದಪಡುತ್ತಿದ್ದರು.

ಮತ್ತೆರಡು ವರ್ಷಗಳು ಕಳೆದುವು. ಆಗ ಗದಾಧರನ ಅಣ್ಣನಾದ ರಾಮೇಶ್ವರ, ತಂಗಿಯಾದ ಸರ್ವಮಂಗಳೆ ಇವರ ಮದುವೆಯಾಯಿತು. ಈಮಧ್ಯೆ ರಾಮಕುಮಾರನ ಹೆಂಡತಿಯು ಅಕ್ಷಯನೆಂಬ ಗಂಡುಮಗುವನ್ನು ಹೆತ್ತು ಸ್ವರ್ಗಸ್ಥಳಾದಳು. ರಾಮ ಕುಮಾರನ ದರಿದ್ರ ಸಂಸಾರದಲ್ಲಿ ಮತ್ತೆ ಶೋಕ ಬಂದು ತುಂಬಿಕೊ೦ಡಿತು. ಅದರ ಜೊತೆಯಲ್ಲಿಯೇ ಏನುಕಾರಣದಿಂದಲೋ ಅವನ ಆದಾಯವು ಬಹಳಮಟ್ಟಿಗೆ ಕಡಿಮೆಯಾಗಿ ಕಡಿಮೆಯಾಗಿ ಹೋಗಿ ಸಂಸಾರ ನಡೆಸುವುದೇ ಕಷ್ಟವಾಯಿತು. ಸಾಲ ಸೂಲಗಳಾದುವು. ಅದನ್ನು ತೀರಿಸುವುದಕ್ಕೆ ಯಾವಮಾರ್ಗವೂ ತೋರದೆ ರಾಮ ಕುಮಾರನು ಊರುಬಿಟ್ಟು ಹೊರಗಡೆ ಎಲ್ಲಿಯಾದರೂ ಹೋದರೆ ಸಂಪಾದನೆಯಾಗಬಹುದೆಂದು ಯೋಚಿಸಿದನು. ಬೇರೆ ಎಲ್ಲಿಯಾದರೂ ಹೋದರೆ ಪವಿಯೋಗದಿಂದ ಉಂಟಾದ ದುಃಖವೂ ಸ್ವಲ್ಪ ಕಡಿಮೆಯಾಗುವ ಸಂಭವವಿತ್ತು. ಆದ್ದರಿಂದ ಅವನು ತನ್ನ ಹೆಂಡತಿ ಸತ್ತ ಸ್ವಲ್ಪ ದಿನಗಳಲ್ಲಿಯೇ ರಾಮೇಶ್ವರನಿಗೆ ಸಂಸಾರವನ್ನು ಒಪ್ಪಿಸಿ ಕಲಕತ್ತೆಗೆ ಹೋಗಿ ಅಲ್ಲಿ ಒಂದು ಸಣ್ಣ ಪಾಠಶಾಲೆಯನ್ನು ಹಾಕಿಕೊಂಡನು.

ಇತ್ತ ಶ್ರೀಮತಿ ಚಂದ್ರಾದೇವಿಯಮೇಲೆ ಮನೆಗೆಲಸಗಳೆಲ್ಲವೂ