೧೪೨ ಕೃಷ್ಣಲೀಲೆ ನೋಯಿಸುತ್ತಿರುವೆಯಲ್ಲಾ ! ಇದು ನಮಗೆ ಎಷ್ಟೊಂದು ಸಂಕಟವ ನ್ನುಂಟುಮಾಡುವುದೋ ನೀನೇ ಯೋಚಿಸಿ ನೋಡು ! ಕೃಷ್ಣಾ! ನನ್ನ ಆತ್ಮಸರವನ್ನೂ ನಿನಗೊಪ್ಪಿಸಿರುವೆವು ! ನಿನ್ನ ಆಧೀನರಾಗಿ ರುವೆವು !! ಆಶ್ರಿತರಾದ ನನಗೆ ನಿನ್ನ ಸಂದರ್ಶನವನ್ನು ಕೊಟ್ಟು ರಕ್ಷಿಸು !!! ರಾಧೆ:-ಲತಾಂಗಿಯರೆ ! ಈಗ ನೀವೆಲ್ಲರೂ ನಿಮ್ಮ ಮಾನಸ ಕಮಲಾಸನದಲ್ಲಿ ಶ್ರೀಕೃಷ್ಣ ಪರಮಾತ್ಮನ ಪಾದಪದ್ಯಗಳನ್ನು ನಿತ್ಯ ಳಂಕ ಪ್ರೇಮಭಾವದಿಂದ ನೆಲೆಗೊಳಿಸಿರಿ. ಏಕಚಿತ್ತ ಮನೋಭಾವ ದಿಂದ ನಾನು ಹೇಳುವ ಈ ಸ್ತೋತ್ರವನ್ನು ಎಲ್ಲರೂ ಹೇಳಿರಿ, ಆಗ ಭಗವಂತನು ನಮಗೆ ಪ್ರತ್ಯಕ್ಷವಾಗುವನು. [ಗೋಪಿಯರೆಲ್ಲರೂ ಭಕ್ತಿಭಾವದಿಂದ ಕೈಮುಗಿದು ನಿಲ್ಲುವರು.] ರಾಧೆ:-(ತಾನೂ ಕೈಮುಗಿದು ನಿಂತು ಪ್ರಾರ್ಥಿಸುವಳು.) ಶೇ || ನಾನ್ಯಂವದಾಮಿನಶೃಣೋಮಿನಚಿಂತಯಾಮಿ | ನಾನ್ಯಂಸ್ಮರಾಮಿನಭಜಾ ಮಿನಚಾಶ್ರಯಾಮಿ । ಭಕ್ತಾ ತ್ವದೀಯಚರಣಾಂಬುಜದಾಸ್ಯಮೇವ | ಹೇಪ್ರಾಣನಾಥಕರುಣಾಕರದೇಹಿನಿತ್ಯಂ || ಜಗನ್ನಾಥಾ ! ಪ್ರಾಣನಾಥಾ ! ಶ್ರೀಕೃಷ್ಣಾ ! ಅಚಂಚಲವಾದ ಭಕ್ತಿಯಿಂದ ನಿನ್ನ ಪಾದಾರವಿಂದಗಳನ್ನು ಧ್ಯಾನಿಸುವ ಭಾಗ್ಯವನ್ನನು ಗ್ರಹಿಸು! ನಿನ್ನ ಹೊರತು ಅನ್ಯರನ್ನು ಆಶ್ರಯಿಸುವುದಿಲ್ಲ. ನುಡಿ ಯುವುದಿಲ್ಲ, ಭಜಿಸುವುದಿಲ್ಲ. ಕೇಳುವುದಿಲ್ಲ. ಏಕೆಂತಭಕ್ತಿಪ್ರಿಯಾ! ಶ್ರೀಕಾಂತಾ ! ಬೇಗನೆ ಪ್ರತ್ಯಕ್ಷನಾಗಿ ರಕ್ಷಿಸು | (ಎಲ್ಲರೂ ಒಂದೇ ವಿಧವಾದ ಭಕ್ತಿಯಿಂದ ಪ್ರಾರ್ಥಿಸುವರು.] ಪಂಚಮಾಂಕಂ-ಪಂಚಮರಂಗಂ. ಈ ಪ್ರದೇಶ:- ಕುಂಜವನ. ಶ್ರೀಕೃಷ್ಣ ಪರಮಾತ್ಮನು ಗೋಪಿಯರ ಭಕ್ತಿಗೆ ಮೆಚ್ಚಿ ಪ್ರತ್ಯ ಕನಾಗುವನು
ಪುಟ:ಶ್ರೀ ಕೃಷ್ಣ ಲೀಲೆ.djvu/೧೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.