ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ho ಶ್ರೀಮದಾನಂದ' ರಾಮಾಯಣ, ತ, ಪಾಕಿಮಹಾಮುನಿಗಳು ಶಿಷ್ಯರೂಡನೆ ಆ ಪರ್ಣಶಾಲೆಯನ್ನು ಪ್ರವೇಶಿ ಸಿ, ಸೀತೆಯನ್ನು ಕೆಲಕಾಲ ಗುಪ್ತವಾಗಿರಿಸಿದರು. ಅವರು ಕಶ-ಲವರಿಗೆ ನಾನಾ ವಿಧವಾದ ಅಭರಣಗಳನ್ನೂ ವಸ್ತ್ರಗಳನ್ನೂ ಧಾರಣಮಾಡಿಸಿ, ಅವರನ್ನು ಕುರಿತು «ಎತ್ತೆ ರಾಜಕುಮರಕರೇ, ಶ್ರೀ ರಾಮನ ಯಡ್ತಿ ಮಂಟಪದ ಬಳಿಯಲ್ಲಿ ರಾಮ ಯಣವನ್ನು ಜನ್ಮಕಾಂಡದ ವರೆಗೆ ನೀವು ಗಾನಮಾಡಿ, ಯಾರು ಕೇಳಿದರೂ ಜನ್ಮಕಾಂಡದಿಂದ ಮುಂದೆ ನನ್ನ ಅಪ್ಪಣೆಯಿಲ್ಲದೆ ನೀವು ಹೇಳಬಾರದು. ಶ್ರೀರಾ ಮನು ಪರಮಹರ್ಷದಿಂದ ನಿಮಗೇನಾದರೂ ಬಹು ಮಾನವನ್ನು ಕೊಟ್ಟರೆ, ಅದ ನ್ನು ನೀವಸ್ವೀಕರಿಸಬೇಡರಿ' ಎಂದು ಆಜ್ಞಾಪಿಸಿ ಅವರನ್ನು ಯಜ್ಞ ಮಂಟಪದ ಕಡೆಗೆ ಕಳುಹಿದರು. ಗುರುಗಳ ಅಪ್ಪಣೆಯಂತೆ ಅವರು ಅಲ್ಲಲ್ಲಿ ರಾಮಾಯಣವನ್ನು ಗಾಯನ ಮಾಡುತ್ತಿದ್ದರು. ಅವರ ಗಾಯನದ ಧ್ವನಿಯು ಶ್ರೀ ಕಾದುನ ಕಿ ವಿಗೆ ಬಿತ್ತು. ಜನರೆಲ್ಲರೂ ಆ ರಾಜಕುಮಾರರನ್ನು ಶ್ಲಾಘಿಸಿದರು. ಶ್ರೀ ದುನು ಆ ಬಾಲಕರನ್ನು ತನ್ನ ಯಜ್ಞ ಮಂಟಪಕ್ಕೆ ಕರೆಸಿ, ಉಚಿತವಾದ ಆಸನದ ಮೇಲೆ ಕುಳ್ಳಿರಿಸಿದನು. ಆ ಹುಡುಗರನ್ನು ನೋಡಿ ಜನರಿಗೆ ಬಹಳ ಆಶ್ಚರ್ಯ ೧ಾಯಿತು. ಅವರಿಬ್ಬರಲ್ಲ ಶ್ರೀ ರಾಮನ ಹೋಲಿಕೆಯೇ ಕಾಣುತ್ತಿತ್ತು. ಅವನ ಬ ಣದಿಂದ ಪೀಡಿತನಾದ ಒಬ್ಬ ದೂತನು ಮಹಾರಾಜಾ, ಈ ಬಾಲಕನೇ ಆ ದಿವಸ ನನ್ನನ್ನು ಕಂಠಗತಪ್ರಾಣರನ್ನು ಮಾಡಿದವನು. ಈತನೇ ನಿಮ್ಮನ್ನು ಬಹಳ ದ ಪಿಸಿದನು' ಎಂದು ಬೆರಳಿನಿಂದ ಅವನನ್ನು ತೋರಿಸಿದನು. ಈ ಮಾತುಗಳನ್ನು ಈ ೪, ಶ್ರೀ ರಾಮನು ಅವರ ಮೇಲೆ ಕೋಪ ಮಾಡಲಿಲ್ಲ, ರಾಮಾಯಣವನ್ನು ಗ ಯನ ಮಾಡುವಂತೆ ಅವರಿಗೆ ಅಪ್ಪಣೆ ಮಾಡಿದನು. ಅವರ ಹೇಳುವ ಪದ್ಧತಿ, ಕಂ ಠಧ್ವನಿ, ಆ ಕಾವ್ಯದ ಸರಳವಾದ ವಿಷಯರಚನೆ ಇವುಗಳನ್ನು ನೋಡಿ 'ಶ್ರೀರಾ ಮನಿಗೆ ಬಹಳ ಹರ್ಷವಾಯಿತು. ಅಷ್ಟರಲ್ಲಿ ಸಂಧ್ಯಾಕಾಲವು ಸನ್ನಿಹಿತವಾಗಲು ಶ್ರೀ ರಾಮನು 'ಎಲೈ ಬಾಲಕರ, ರಾಮಾಯಣವನ್ನು ಬಹಳ ಮಧುರವಾಗಿ ಗಾನಮಾಡಿದಿರಿ, ನಾಳೆ ಪ್ರಾತಃಕಾಲಕ್ಕೆ ಬಂದು ಮುಂದಿನ ಇತಿಹಾಸ ವನ್ನು ಗಾನಮಾಡಿ ನಮ್ಮ ಮನಸ್ಸು ಸಂತೋಷಗೊಳಿಸಿರಿ. ಎಲ್ಲೆಲವನೆ, ನೀನು ನನಗೆ ಅಸಂಧಿಯಾಗಿದ್ದರೂ, ನಿನ್ನ ಗಾಯನ ಶಕ್ತಿಯನ್ನು ನೋಡಿ ನನಗೆ ಬಹಳ ಸಮಾಧಾನವಾಗಿದೆ. ಈಗ ನಿನ್ನ ಅಪರಾಧವನ್ನು ಕ್ಷಮಿಸಿರುವನು. ಇನ್ನು ಏನೂ ಭಯವಿಲ್ಲದೆ ನಿಮ್ಮ ಬಿಡಾರಗಳಿಗೆ ಪ್ರಯಾಣಮಾಡಿರಿ” ಎಂದು ಹೇಳಿದನು,