ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು



ಸ೦ತಾಪಕ.

_____________________________________________________________________________________________________________ ಮಾತ್ರ ಹಾಗಿರಲಿಲ್ಲ. ಉಕ್ಕಿನಷ್ಟು ಕಠಿನವಾಗಿದ್ದಿತೆಂದು ಹೇಳಿದರೆ ಅತಿ
ಶಯೋಕ್ತಿಯೆನಿಸಿಕೊಳ್ಳದು. ಐತಿಹಾಸಿಕವ್ಯಕ್ತಿಗಳಾದ ತೈಮೂರ್‌ ಲ೦ಗ
ನಾದಿರಷಹ ಮೊದಲಾದವರಂತೆ ಇವನೂ ಸುಪ್ರಸಿದ್ಧನಾದ ಘಾತುಕನೇ
ಆಗಿದ್ದನು. ಆಗಣಕಾಲದಲ್ಲಿ ಇವನ ಹೆಸರನ್ನು ಕೇಳದಿರುವವರೇ
ಅತಿ ವಿರಳ. ಪರರು ತನಗೆ ಸ್ವಲ್ಪ ಘಾಸಿಯನ್ನುಂಟುಮಾಡಿದರೂ ಅವರ
ನ್ನಿವನು ಸಂಹರಿಸದೆ ಬಿಡುತ್ತಿರಲಿಲ್ಲ. ದ್ರವ್ಯಾರ್ಜನೆಯೇ ಇವನ
ಮುಖ್ಯೋದ್ದೇಶವಾಗಿದ್ದಿತು. ಇವನು ಘೋರಕೃತ್ಯಗಳಲ್ಲಿಯೇ ಆಸಕ್ತನಾಗಿ
ದ್ದರೂ ಒಂದೊಂದುವೇಳೆ ಪ್ರಾಚೀನ ಕವಿವರ್ಣಿತರಾದ ಮಹಾ ವೀರರ
ಚರಿತ್ರೆಗಳನ್ನೋದಿ ತನ್ನ ಧೈರ್ಯ ಸಾಹಸಾದಿಗಳನ್ನು ಅಭಿವೃದ್ಧಿಪಡಿಸಿ
ಕೊಳ್ಳು ತ್ತಿದ್ದನು. ಪರೋಪಕಾರ, ವಿಧೇಯತೆ, ಯಥಾರ್ಥತ್ವ ಮುಂತಾದ
ಸದ್ಗುಣಗಳು ಇವನ ಬಳಿಯಲ್ಲಿ ಎವೆಯಿಕ್ಕುವಷ್ಟು ಹೊತ್ತಾದರೂ ಇರು
ತ್ತಿರಲಿಲ್ಲ. ಇವನಿಗೆ ಸಹಾಯಕನಾಗಿದ್ದ ಮತ್ತೊಬ್ಬನ ಹೆಸರು ನಂದ
ಕುಮಾರಮಿತ್ರ, ನಂದ
ಕುಮಾರಮಿತ್ರನು ಕುಬ್ಬನಾಗಿಯೂ ಭೀರುಸ್ವಭಾವ
ವ್ರಜ್ಞನನಾಗಿಯೂ ಇದ್ದನು. ನಿದ್ರಾಹಾರಗಳಲ್ಲಿ ಸ್ವಲ್ಪ ಲೋಪವುಂಟಾ
ದರೂ ಇವನು ಸೈರಿಸಲಾರದವನಾಗಿದನು. ಇವನು ಒಬ್ಬ ಧನಿಕನ ಮಗ.
ಸಂತಾಪಕನ ಮಾಯೋಪಾಯದಿಂದ ಅವನಿಗೆ ಅಧೀನನಾಗಿ ಸರ್ವಸ್ವ
ನನ್ನೂ ಒಪ್ಪಿಸಿ ಅವನ ಆಜ್ಞಾನುವರ್ತಿಯಾಗಿದ್ದನು. ಸಹವಾಸಬಲದಿಂದ
ಅವನ ದುರ್ಗುಣಗಳು ಇವನಲ್ಲಿಯೂ ಕಿಂಚಿತ್ ಪದಾರ್ಪಣಮಾಡಿದುವು.
ಸಂತಾಪಕನೂ ನಂದಕುಮಾರಮಿತ್ರನೂ ಇಬ್ಬರೂ ಸಮಾನವಯಸ್ಕರಾ
ಗಿದರು. ನಾವೆಷ್ಟು ಹುಡುಕಿದರೂ ಇವರ ವಾಸಸ್ಥಾನವೆಲ್ಲಿರುವುದೆಂಬ
ವಿಷಯವು ಇದುವರೆಗೂ ವಿಶದವಾಗಿಲ್ಲ. ಆದರೆ ಇವರು ಪ್ರಯಾಣಿಕರನ್ನು
ಹಿಡಿದು ಹಿಂಸಿಸಿ ಅವರ ವಸ್ತ್ರಾಭರಣಗಳನ್ನಪಹರಿಸುತ್ತಿದ್ದ ಸ್ಥಳವನ್ನು
ಮಾತ್ರ ನಮ್ಮ ಪಾಠಕಮಹಾಶಯರಿಗೆ ಈಗ ತಿಳಿಸುವೆವು.
ಪ್ರಸನ್ನನಗರದಿಂದ ದಕ್ಷಿಣಕ್ಕೆ ಒಂದೆರಡು ಹರದಾರಿಯ ದೂರ
ಹೋದರೆ ಒಂದು ಸಣ್ಣ ಗುಡ್ಡವು ಕಾಣಿಸುವುದು, ಆ ಗುಡ್ಡದ ಎರಡು
ಪಾರ್ಶ್ವಗಳಲ್ಲಿಯೂ ಎರಡು ಮಾರ್ಗಗಳು ಕಣೇಳಿಸುವುವು, ಬಲಗಡೆಯ
ಮಾರ್ಗದಲ್ಲಿ ಹೋದರೆ ಚಂದ್ರನಗರವನ್ನು ನೋಡಬಹುದು. ಎಡಗಡೆಯ