ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದೇಶದ ಕರೆಗಳು ಸುರುಚಿಯ ಈ ಮಾತುಗಳು ಅವನ ಕಿವಿಯಲ್ಲಿ ಗುಂಯ್ಗುಡುತ್ತಿ ದೃವು ನೆನೆದಾಗಲೆಲ್ಲ ಧ್ರುವನ ಮುಖ ಕೆಂಪಾಗುತ್ತಿತ್ತು ಕಣ್ಣಿನಲ್ಲಿ ಧಾರಾಕಾರ ನೀರು ಅವಮಾನ ಸಹಿಸಲಾಗದ ಸಿಟ್ಟು, ತನ್ನ ತಾಯಿ ನುನೀತಿಯ ಬಳಿ ಓಡೋಡಿ ಬಂದ ಅನಹನೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತ ನಡೆದ ಕತೆಯನ್ನೆಲ್ಲ ಹೇಳಿದ ಕೇಳಿದ ತಾಯಿ ಸುನೀತಿ ಖಿನ್ನಳಾದಳು ಬಾಡಿದ ಮುಖದಲ್ಲಿ ಮಗುವನ್ನು ಸಂತೈಸುತ್ತ ಹೇಳಿದಳು ಮಗು! ನಿನ್ನ ಚಿಕ್ಕಮ್ಮ ಹೇಳಿದ ಮಾತು ಸರಿಯಾಗಿದೆ ನನ್ನಂತಹ ದುರ್ಭಾಗ್ಯವಂತಳ ಹೊಟ್ಟೆಯಲ್ಲಿ ನೀನು ಹುಟ್ಟಿರುವೆ ಆ ನಿನ್ನವ್ವ ನನ್ನನ್ನು ತನ್ನ ಮಡದಿಯೆಂದು ಹೇಳಲೇ ನಾಚುವಾಗ, ನಿನ್ನನ್ನು ಮಗನೆಂದು ಒಪ್ಪುವನೇ ? ಆದ್ದರಿಂದ ನಿನ್ನ ಸಮಸ್ಯೆಗೆ ಯಾರೂ ಉತ್ತರಿಸಲಾರರು ಹೋಗು ಆ ದೇವ ದೇವ ಭಗವಂತನ ಬಳಿಗೇ ಹೋಗು ಅವನನ್ನೇ ಆಶ್ರಯಿನು ಅವನ ಬಳಿಯೇ ನಿನ್ನ ಅಭಿಲಾಷೆ ಪೂರೈಸುವದು ಹೋಗು ಆ ದೇವರನ್ನೇ ಆರಾಧಿಸು ಭಜಿಸು' ತಾಯಿ ಸುನೀತಿಯ ಉತ್ತೇಜನದಿಂದ ಸ್ಫೂರ್ತಿ ವಡೆದ ಧ್ರುವ ಭಗವಂತನಿಗಾಗಿ ಮನೆ ಬಿಟ್ಟು ಹೊರಟ ಭಗವಂತನನ್ನು ಎಲ್ಲಿ ಅರಸುವದು? ಭಗವಂತನನ್ನು ಕಾಣುವ ಬಗೆ ಹೇಗೆ? ಅವನಿಗೊಂದೂ ಗೊತ್ತಿಲ್ಲ ಆದರೆ, ಮನದಲ್ಲಿ ಭಗವಂತನನ್ನು ಕಾಣುವ ಛಲವಿದೆ ಧೈರ್ಯವಿದೆ ಇಂತಹ ಸ್ಥಿತಿಯಲ್ಲಿ ದಾರಿಯಲ್ಲಿ ನಾರದರು ಧ್ರುವನನ್ನು ಕಂಡರು ವಾವ ಮುಗ್ಧ ಮಗು! ಐದು ವರ್ಷದ ಹಸುಳೆ ಆದರೆ ಅವಮಾನ ಸಹಿನದ ಕ್ಷಾತ್ರ ತೇಜನ್ನು ನಾರದರು ಧ್ರುವನ ಮನದಲ್ಲಿ ಮನೆ ಮಾಡಿದ ಭಗವಂತನಿಗಾಗಿ ತುಡಿತ ಅವನನ್ನು ಕಾಣುವ ಅದಮ್ಯ ಬಯಕೆ ಅವನ ಅನುಗ್ರಹಕ್ಕಾಗಿ ಕಾತರ ತೀವ್ರ ಹಂಬಲವನ್ನು ಅರಿತರು ಆ ಮಗುವಿಗೆ ಮಾರ್ಗದರ್ಶನ ಮಾಡಿದರು 'ಮಗು' ಧ್ರುವ ಭಗವಂತನನ್ನು ಕಾಣಬೇಕೆಂಬ ನಿನ್ನ ಛಲ ಕಂಡು ನನಗೆ ಮೆಚ್ಚಿಗೆಯಾಗಿದೆ. ಆದರೆ, ಭಗವಂತನನ್ನು ಕಾಣುವದು ಅಷ್ಟು