ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದೇಶದ ಕಧೆಗಳು ಭಗವಂತನನ್ನು ಕಂಡುಬಂದ ಧ್ರುವ ಧ್ರುವ, ಚಕ್ರವರ್ತಿ ಉತ್ತಾನವಾದನ ಇಬ್ಬರು ಮಕ್ಕಳಲ್ಲಿ ಹಿರಿಯವ ಉತ್ತಾನವಾದನಿಗೆ ಇಬ್ಬರು ನತಿಯರು - ಸುನೀತಿ ಹಾಗೂ ಸುರುಚಿ ಸುರುಚಿಯ ಮಗ ಉತ್ತಮ ಕಿರಿಯ ಸುನೀತಿಯಲ್ಲಿ ಜನಿಸಿದ ಧ್ರುವ ಹಿರಿಯ ಉತ್ತಾನವಾದನಿಗೆ ಸುರುಚಿ ನೆಚ್ಚಿನ ಮಡದಿ ಅವಳ ಸೌಂದರ್ಯ - ವಿಲಾಸಗಳಿಗೆ ಮರುಳಾದ ಚಕ್ರವರ್ತಿಗೆ ಸುನೀತಿಯತ್ತ ತಾತಾರ ಜೊತೆಗೆ ಸುರುಚಿಗೆ ಅಪ್ರಿಯವಾಗುವುದನ್ನು ಮಾಡುವ ಧೈರ್ಯವೂ ರಾಜನಿಗೆ ಇಲ್ಲ ಹೀಗಾಗಿ ಅರಮನೆಯಲ್ಲಿ ಹಿರಿಯಳಾದರೂ ಸುನೀತಿಗೆ ದನಿಯಲ್ಲ ಕಿರಿಯಳಾದರೂ ಸುರುಚಿಯೇ ಎಲ್ಲ!! ಇದಕ್ಕೆ ರಾಜನದೂ ಪ್ರತಿ ಮಾತಿಲ್ಲ!! ಒಂದು ದಿನ ನಡೆದ ಘಟನೆಯೊಂದು ಪುಟ್ಟ ಬಾಲಕ ಧ್ರುವನ ದಿಕ್ಕನ್ನೇ ಬದಲಾಯಿಸಿತು ಅವನ ಮನದಲ್ಲಿ ಛಲದ ಬೀಜ ಬಿತ್ತಿತು ಅವನನ್ನು ಭಗವಂತನೆಡೆಗೆ ಕರೆದೊಯ್ದಿತು ಆ ದಿನ ಉತ್ತಮ ಅವ್ವ ಉತ್ಸಾನವಾದನ ತೊಡೆಯನ್ನೇರಿ ಆಟವಾಡುತ್ತಿದ್ದ ತಂದೆ ಉತ್ತಾನವಾದ ಅವನನ್ನು ಮುದ್ದು ಮಾಡುವ ದೃಶ್ಯ ಕಂಡಾಗ ಪುಟ್ಟ ಮಗು ಧ್ರುವನಿಗೂ ಆಸೆಯಾಯಿತು ಅವನೂ ತಂದೆಯ ಬಳಿ ಬಂದ ತೊಡೆಯನ್ನೇರಿ ಕುಳಿತುಕೊಳ್ಳಲು ತವಕಿಸಿದ ಉತ್ತಾನವಾದನಿಗೆ ಧ್ರುವನನ್ನು ಎತ್ತಿಕೊಂಡು ಮುದ್ದಾಡುವ ಧೈರ್ಯವಿಲ್ಲ ಹತ್ತಿರದಲ್ಲೇ ನಿಂತಿದ್ದ ಸುರುಚಿ ಎಲ್ಲಿ ಮುನಿಸಿಕೊಳ್ಳುವಳೋ ಎಂಬ ಭಯ ಅವನಿಗೆ ! ಅವನು ಧ್ರುವನ ಆನೆಯನ್ನು ಪುರಸ್ಕರಿಸಲಿಲ್ಲ ಧ್ರುವನಿಗೆ ಬೇಸರವಾಯಿತು ಅಲ್ಲೇ ನಿಂತಿದ್ದ ಚಿಕ್ಕಮ್ಮ ಸುರುಚಿಯ ವ್ಯಂಗ್ಯದ ಮಾತು ಕೇಳಿದ ಮೇಲಂತೂ ಧ್ರುವನ ದುಃಖ ಹೇಳತೀರದು ಏಯ್! ಧ್ರುವ! ನನ್ನ ಹೊಟ್ಟೆಯಲ್ಲಿ ಹುಟ್ಟದ ನಿನಗೆ ತಂದೆಯ ತೊಡೆಯೇರುವ ಅರ್ಹತೆಯಿಲ್ಲ ನಿನಗೆ ಒಂದು ವೇಳೆ ಆ ಬಯಕೆ ಇದ್ದರೆ, ಹೋಗು ದೇವರಲ್ಲಿ ಕೇಳು ಮತ್ತೊಮ್ಮೆ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬಾ ಆಗ ”