ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು ಗುರಿ ““ಅದೋ! ಆ ಮರದ ತುದಿಯಲ್ಲಿ ತೂಗುಬಿಟ್ಟಿರುವ ಹಕ್ಕಿಯ ಬೊಂಬೆಯ ಕಣ್ಣಿಗೆ ಗುರಿಯಿಟ್ಟು ನಿನ್ನ ಬಾಣ ಬಿಡು.” ಶಿಷ್ಯ ಬಿಲ್ಲ ಹೆದೆಯೇರಿಸಿ ಗುರಿಯಿಟ್ಟು ನಿಂತ. “ಒಂದು ನಿಮಿಷ... ಅಲ್ಲಿ ನಿನಗೇನು ತೋರುತ್ತಿದೆ? ಹೇಳು “ಗುರುಗಳೇ, ಆ ಮರ, ಅದರ ಕೊಂಬೆಗಳು... ಎಲೆಗಳು... ಕಾಯಿಗಳು... ಮತ್ತೆ..” “ಸಾಕು...ನೀನು ಬಿಲ್ಲು ಬಾಣ ಕೆಳಕ್ಕೆ ಇರಿಸಿ. ಹಿಂದೆ ಬಾ... ನಿನ್ನ ಪರೀಕ್ಷೆ ಮುಗಿಯಿತು.” ಹೀಗೆ ದ್ರೋಣಾಚಾರ್ಯರ ವಿದ್ಯಾಲಯದಲ್ಲಿ ಶಿಷ್ಯರ ಧನುರ್ವಿದ್ಯಾಪ್ರಾವೀಣ್ಯದ ಪರೀಕ್ಷೆ ನಡೆದಿತ್ತು ಪ್ರತಿಯೊಬ್ಬ ಶಿಷ್ಯನೂ ಹೆಚ್ಚು ಕಡಿಮೆ ಇದೇ ತೆರನಾದ ಉತ್ತರ ಹೇಳುತ್ತಿದ್ದ ಪರೀಕ್ಷೆ ಅಲ್ಲಿಗೆ ಮುಗಿಯುತ್ತಿತ್ತು, ಅರ್ಜುನನ ಸರದಿ ಬಂದಿತು. ಗುರುಗಳು ಎಲ್ಲರಿಗೂ ಕೇಳಿದ ಪ್ರಶ್ನೆಯನ್ನೇ ಕೇಳಿದರು. “ಅರ್ಜುನ! ಅಲ್ಲಿ ನಿನಗೇನು ತೋರುತ್ತಿದೆ? 'ಹಕ್ಕಿಯ ಕಣ್ಣು!' ನೇರವಾದ ದೃಢವಾದ ಉತ್ತರ. ಅರ್ಜುನ ತನ್ನ ಗುರಿಯತ್ತ ನೆಟ್ಟ ನೋಟ ಕದಲಿಸದೇ ಉತ್ತರಿಸಿದ. ಅರ್ಜುನ ದ್ರೋಣರ ಮೊಗದಲ್ಲಿ ಮೆಚ್ಚಿಗೆಯ ನೋಟ. 'ಬಾಣ ಬಿಡು' ಎಂದು ಗುರುಗಳ ಮಾತು ಹೊರಬಂದಿದ್ದೇ ತಡ, ಹಕ್ಕಿಯ ಗೊಂಬೆಯ ಕಣ್ಣಲ್ಲಿ ಬಾಣ ನೆಟ್ಟಿತ್ತು ಅರ್ಜುನ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಗುರುಗಳ ನೆಚ್ಚಿನ ಶಿಷ್ಯನಾದ.