ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು ಆಧ್ಯಾತ್ಮದ ಸಾಧನೆಯಲ್ಲಿಯೂ ನಾವೂ 'ಅರ್ಜುನ'ರಾಗಬೇಕು. ಆಧ್ಯಾತ್ಮದ ದಾರಿಯಲ್ಲಿ ಭಗವಂತನೇ ನಮ್ಮ ಗುರಿ. ಮನಸ್ಸು ಬಾಣ. ಮನಸ್ಸೆಂಬ ಬಾಣವನ್ನು ಭಗವಂತನ ಬಳಿ ಚಿಮ್ಮಿಸುವ ಬಿಲ್ಲು 'ವೇದ'. ಆದರೆ, ಇಂತಹ ವೇದವೆಂಬ ಬಿಲ್ಲು ಹಿಡಿದು, ಅದರಲ್ಲಿ 'ಮನ' ವೆಂಬ ಬಾಣ ಹೂಡಿ, ಅಂತರ್ಯಾಮಿಯಾದ 'ಭಗವಂತ' ನನ್ನ ಗುರಿಯಿಟ್ಟು ಹೊಡೆಯುವ ಗುರಿಕಾರನಿಗೆ ಗುರಿಯ ಹೊರತು ಬೇರೊಂದು ಲಕ್ಷದಲ್ಲಿರಬಾರದು. - ಮಹಾಭಾರತ “ಪ್ರಣಮೋ ಧನು: ಶರೋ ಹ್ಯಾತ್ಸಾ ಬ್ರಹ್ಮತಲಕ್ಷ್ಮಮುಚ್ಯತೇ| ಅಪ್ರಮತ್ತೇನ ವೇದವ್ಯಂ ಶರವತಯೋ ಭವೇತ್' 11 - ಉಪನಿಷತ್ ಪ್ರಣವವೇ ಬಿಲ್ಲು ; ಮನವೇ ಬಾಣ ; ಬ್ರಹ್ಮತತ್ವವೇ ಗುರಿ. ಗುರಿತಪ್ಪದೇ ಬಾಣ ಬಿಡಬೇಕು. ಬಾಣದಂತೆ ಗುರಿ ಸೇರಬೇಕು.