ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಧೆಗಳು a .. ಹಾಲಿನ ಸವಿ ಆಗಿನ್ನೂ ಅಶ್ವತ್ಥಾಮ ಸಣ್ಣ ಮಗು ಆಚಾರ್ಯ ದ್ರೋಣರಿಗೆ ನೆಲೆಯೊಂದು ದೊರಕಿರಲಿಲ್ಲ ಮನೆಯಲ್ಲಿ ಬಡತನ ಮಗುವಿಗೆ ಹಸುವಿನ 'ಹಾಲು ಕೊಡುವಷ್ಟೂ ನಾಮರ್ಧ್ಯವಿಲ್ಲ ಅಶ್ವತ್ಥಾಮನಿಗೋ ಹಾಲು ಕುಡಿಯಬೇಕೆಂಬಾನೆ! ಹರ ಹಿಡಿದ ಅವನ ಅಮ್ಮ ತಾನೆ ಎಲ್ಲಿಂದ ಹಾಲು ತಂದಾಳು ಹಾಲು ಕೊಡದೇ ಮಗುವಿನ ಹರ ನಿಲ್ಲಿಸಲಾದೀತೆ? ಕೊನೆಗೆ ಹೋಗೋ 'ಹಾಲು' ನೀಡಿದಳು ಹಿಟ್ಟುನೀರಿನ ಹಾಲು 1! 'ಹಾಲು ಕುಡಿದ ಮಗು ಹರ ನಿಲ್ಲಿಸಿತು ಪ್ರತಿನಿತ್ಯ ಅಶ್ವತ್ಥಾಮ ಅದೇ 'ಹಾಲು ಕುಡಿಯುತ್ತಿದ್ದ ಹಾಲಿನ ಖುಷಿ ಪಡೆಯುತ್ತಿದ್ದ ಹಿಟ್ಟು - ನೀರಿನ ಹಾಲೇ ಅವನ ನಾಲಿಗೆ 'ಹಾಲು'! ಒಮ್ಮೆ ಜೊತೆಗಾರರೊಂದಿಗೆ ಆಡಹೋದ ಅಶ್ವತ್ಥಾಮ ಸಂಜೆ ಅಲ್ಲಿಯೇ ಉಳಿದ ಆಟದ ನಂತರ ಅಲ್ಲಿ ಎಲ್ಲ ಮಕ್ಕಳಿಗೂ 'ಹಾಲು' ನೀಡಲಾಯಿತು ಕೇಸರ-ಸಕ್ಕರೆ ಬೆರೆಸಿದ ಹಾಲು ಅಶ್ವತ್ಥಾಮನೂ 'ಹಾಲು' ಕುಡಿದ ಬೆರಗಾದ! ಇಷ್ಟು ರುಚಿಯ ಹಾಲನ್ನು ಅವನೆಂದೂ ಕುಡಿದೇ ಇರಲಿಲ್ಲ ಅವನಿಗೆ ಅರ್ಥವಾಗುವುದು ತಡವಾಗಲಿಲ್ಲ ತನಗೆ ತನ್ನ ಅಮ್ಮ ಸುಳ್ಳು ಹೇಳಿದ್ದಾಳೆ ಎಂದು ಅವನಿಗೆ ಅನ್ನಿಸಿತು ಕೋವದಲ್ಲಿ ಅಮ್ಮನ ಬಳಿಗೆ ಬಂದ ಹಾಲು ಕೊಡು ಎಂದು ಕೇಳಿದ ಅಮ್ಮ ಎಂದಿನಂತೆ 'ಹಾಲು' ಮಾಡಿ ನೀಡಿದಳು ಅಶ್ವತ್ಥಾಮ ಈಗ ನಿಜವಾದ ಹಾಲಿನ ರುಚಿ ಕಂಡು ಬಂದವ ಹಾಲೆಂದರೇನು ಎಂಬುದನ್ನು ಅರಿತವ ಅಮ್ಮನೀಡಿದ ಹಾಲಿನ ಬಟ್ಟಲನ್ನು ಬೀಸಿ ಎಸೆದ ತನಗೆ ನಿಜವಾದ ಹಾಲು ಬೇಕೆಂದು ಹರ ಹಿಡಿದ ಅಮ್ಮನಿಗೆ ಗಾಬರಿಯಾಯಿತು ಅವಳ ಹಾಲಿನ ಗುಟ್ಟು ರಟ್ಟಾಗಿತ್ತು ಕೊನೆಗೆ ಅವನ ಅಮ್ಮ ನಿಜವಾದ ಹಾಲು ತಂದು ಕೊಟ್ಟಾಗಲೇ ಅಶ್ವತ್ಥಾಮ ಸುಮ್ಮನಾದದ್ದು! ಹಿಟ್ಟಿನ ಹಾಲಿನ ರುಚಿ, ಹಸುವಿನ ಹಾಲು' ಸವಿಯುವ ವರೆಗೆ !!