ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕದೆಗಳು 19 ಬ್ರಹ್ಮಚರ್ಯ ದೇವಲೋಕದ ಸಭೆಯಲ್ಲಿ ದೇವಸುಂದರಿ ಊರ್ವಶಿಯ ನರ್ತನ ನಡೆಯುತ್ತಿದೆ ನೆರೆದ ಜನರೆಲ್ಲ ಅವಳ ಒನವು-ವಯ್ಯಾರಗಳಿಗೆ ಹಾವ- ಭಾವ, ಲಾನವಿಲಾನಗಳಿಗೆ ಬೆಕ್ಕಸ ಬೆರಗಾಗಿ, ಮಾರು ಹೋಗಿದ್ದಾರೆ ಅಂದಿನ ದೇವೇಂದ್ರನ ವಿಶೇಷ ಅತಿಧಿ ಅರ್ಜುನ ಅರ್ಜುನ ಊರ್ವಶಿಯ ಬಗೆಗೆ ತುಂಬ ಕೇಳಿದ್ದ ಕಂಡಿರಲಿಲ್ಲ ಈಗ ನರ್ತನ ಮಾಡುತ್ತಿದ್ದ ಅವಳನ್ನು ತದೇಕ ದೃಷ್ಟಿಯಿಂದ ನೋಡತೊಡಗಿದ ದೇವೇಂದ್ರ ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅಂದು ಸಂಜೆ ಊರ್ವಶಿಯನ್ನು ಕರೆದು ಅವಳನ್ನು ಅರ್ಜುನನ ವಿಶೇಷ ಆರೈಕೆಗೆ ದೇವೇಂದ್ರ ನಿಯಮಿಸಿದ ದೇವೇಂದ್ರನ ಆದೇಶದಂತೆ ಊರ್ವಶಿ ಅರ್ಜುನ ವಾಸವಾಗಿದ್ದ ಅತಿಧಿಗೃಹಕ್ಕೆ ಹೋದಳು ಊರ್ವಶಿ ದೇವಲೋಕದ ದಾಸಿ, ನಿತ್ಯಮೋಡಶಿ, ಅವರೂವದ ರೂವಸಿ! ಅವಳಿರುವುದೇ ದೇವೇಂದ್ರನ ಅತಿಧಿಗಳ ಆತಿಥ್ಯಕ್ಕಾಗಿ!! ಈ ದಿನ ಅವಳು ಅರ್ಜುನನಿಗಾಗಿ!! ಮನಮೋಹಕವಾಗಿ ಸಿಂಗರಿಸಿಕೊಂಡು ಬಾಗಿಲ ಬಳಿ ಬಂದು ನಿಂತ ಊರ್ವಶಿಯತ್ತ ಅರ್ಜುನ ನೋಡಿದ ಬೆರಗಾದ ಅವಳನ್ನು ಸ್ವಾಗತಿಸಿದ ಅವಳಿಗೆ ಶಿರಬಾಗಿ ನಮಿಸಿ ಗೌರವಿಸಿದ ಮನದ ತುಂಬೆಲ್ಲ ಬಯಕೆ ಹೊತ್ತು ಬಂದ ಊರ್ವಶಿ ಅರ್ಜುನನ ವರ್ತನೆ ತನ್ನ ಸೌಂದರ್ಯ- ಯೌವನಗಳಿಗೆ. ಅವಮಾನವೆಂದು ಬಗೆದಳು ಅವಳಿಗೆ ಕೋಪ ಬಂತು ಶೃಂಗಾರದ ರಾಗವೆಲ್ಲ ಕರಗಿ, ಅನುರಾಗವೆಲ್ಲ ತಿರುಗಿ ಅವಳ ಕಣ್ಣು ಕೆಂವಾದವು ಅರ್ಜುನನಿಗೆ ನವುಂಸಕನಾಗು ಎಂದು ಶಾಪವಿತ್ತಳು ಅರ್ಜುನ ಅವಳಲ್ಲಿ ವಿನಂತಿಸಿದ “ಅಮ್ಮಾ! ಊರ್ವಶೀ! ನೀವು ನನ್ನ ತಾಯಿಯಂತೆ ಆದರಣೀಯರು ನೀವು ನನ್ನ ಮುತ್ತಜ್ಜ ವುರೂರವನ ಮಡದಿಯಲ್ಲವೇ?