ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು ನಗಾರಿ ಎಚ್ಚರ ರಾಜಾಸ್ಥಾನದ ಕಾರ್ಯಕಲಾಪಗಳೆಲ್ಲ ಮುಗಿದು ಮಂತ್ರಿಗಳೆಲ್ಲ ಮನೆಗೆ ತೆರಳಿದ್ದರುಕೋಶಾಧಿಕಾರಿಗಳೂ ಇರಲಿಲ್ಲ ಬಡಬ್ರಾಹ್ಮಣನೋರ್ವ ಬಹು ದೂರದಿಂದ ಬಂದ ಚಕ್ರವರ್ತಿ ಧರ್ಮರಾಯನ ಬಳಿ ತಾನು ನಡೆಸುವ ಯಜ್ಞಕ್ಕಾಗಿ ದಾನವಾಗಿ ಸಹಾಯಧನ ಬೇಡಿದ ತರಾತುರಿಯಲ್ಲಿದ್ದ ಧರ್ಮರಾಜ ಮಾರನೇ ದಿನ ಬರಲು ಬ್ರಾಹ್ಮಣನಿಗೆ ತಿಳಿಸಿದ ಆ ಬ್ರಾಹ್ಮಣನಿಗೆ ತನ್ನೂರಿಗೆ ಹಿಂದಿರುಗುವ ಆತುರ ತಕ್ಷಣ ಯುವರಾಜ ಭೀಮಸೇನನ ಬಳಿ ಸಾಗಿದ ತನ್ನ ಪರಿಸ್ಥಿತಿ ಅರುಹಿದ ನಡೆದ ಘಟನೆಯನ್ನೂ ಹೇಳಿದ ಆ ಬ್ರಾಹ್ಮಣನು ಯೋಚಿಸಿದಾಕ್ಷಣ ಒಂದು ಕ್ಷಣವೂ ಯೋಚಿಸದೇ ಭೀಮನೇನ ತನ್ನ ಕೈಯ ಚಿನ್ನದ ಕಡಗ ತೆಗೆದು ಅವನಿಗೆ ದಾನವಿತ್ತ ಮಹಾದ್ವಾರದ ಬಳಿ ಬಂದು, ದ್ವಾರಪಾಲರಿಗೆ ಸಂತಸದ ನಗಾರಿಯ ಮೊಳಗಿಸಲು ಆದೇಶಿಸಿದ ಆ ನಗಾರಿಯ ದನಿಯನ್ನು ಕೇಳಿದ ಧರ್ಮರಾಜ ವಿಷಯವೇನೆಂದು ಭೀಮಸೇನನ್ನು ಕರೆಸಿ ಕೇಳಿದ ಅದಕ್ಕೆ ನಗುತ್ತ “ನಮ್ಮ ಚಕ್ರವರ್ತಿಗಳು ನಾಳೆಯೂ ಜೀವಿಸಿರುತ್ತಾರೆಂಬುದನ್ನು ತಿಳಿದು ಆ ಸಂತಸದ ಸುದ್ದಿಯ ಹರಡಲು ಈ ನಗಾರಿಯ ಸದ್ದು! ಎಂದು ಭೀಮಸೇನ ಧರ್ಮರಾಜನಿಗೆ ನಾಚಿಕೆಯಾಯಿತು ನತ್ಕಾರ್ಯಗಳನ್ನು ಮುಂದೆ ಮುಂದೆ ಹಾಕುವ ನಮ್ಮ ಪ್ರವೃತ್ತಿಯ ಬಗೆಗೆ ಕಟುಹಾಸ್ಯದ ಜೊತೆಗೆ ಈ ಕತೆ ಎಚ್ಚರ ನೀಡುತ್ತದೆ “ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್‌' ಅನುಕ್ಷಣ ನಾವಿನ ದವಡೆಯಲ್ಲಿರುವ ನಾವು ಧರ್ಮಕಾರ್ಯವನ್ನು ವಿಳಂಬವಿಲ್ಲದೇ ನಡೆಸಬೇಕು - ಮಹಾಭಾರತ