ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಧೆಗಳು 25 25 ಶಿಬಿಯ ಆತ್ಮಬಲಿದಾನ ಇನ್ನೇನು ರಾಜಾ ಶಿಬಿ ಯಜ್ಞಾಂಗವಾದ ದಾನವನ್ನೆಲ್ಲ ನೀಡಿ, ಹೊರಟು ನಿಂತಿದ್ದ ಅಷ್ಟರಲ್ಲಿ ವುಟ್ಟ ವಾರಿವಾಳವೊಂದು ಅವನ ತೊಡೆಯನೇರಿ ಕುಳಿತಿತು ಭಯದಿಂದ ನಡುಗುತ್ತಿದ್ದ ಆ ಹಕ್ಕಿಯ ಕಂಗಳು ರಾಜನಲ್ಲಿ ಅಭಯ ಭಿಕ್ಷೆಯ ಬೇಡುತ್ತಿದ್ದವು ರಾಜ ಪ್ರೀತಿಯಿಂದ ಅದರ ಮೈದಡವಿದ ಅಭಯ ನೀಡಿದ ಹಿಂದೆಯೇ ಇದ್ದಕ್ಕಿದ್ದಂತೆ, ಭಾರೀ ಗಾತ್ರದ ಗಿಡುಗವೊಂದು ಬಂದೆರಗಿತು ರಾಜನ ಬಳಿ ಅಡಗಿ ಕುಳಿತ ಪಾರಿವಾಳವನ್ನು ಕಚ್ಚಿಕೊಂಡು ಹೋಗುವ ಆತುರ ಅದಕ್ಕೆ! ರಾಜನಿಗೆ ಅರ್ಥವಾಯಿತು ಗಿಡುಗಕ್ಕೆ ಹೇಳಿದ 'ಗಿಡುಗನೇ! ಈ ಪುಟ್ಟ ಪಾರಿವಾಳ ಈಗ ನನ್ನ ಅತಿಧಿ ನನ್ನ ಬಳಿ ಅಭಯ ಬೇಡಿ ಬಂದ ಶರಣಾರ್ಧಿ ನಾನಿದನ್ನು ನಿನಗೆ ಬಿಟ್ಟು ಕೊಡಲಾರೆ ನಿನ್ನ ದಾರಿ ನೀ ಹುಡುಕಿಕೊಳ್ಳಬಹುದು ? 'ಹೇ ರಾಜನ್, ಆಹಾರ ಎಲ್ಲ ಪ್ರಾಣಿಗಳ ಜನ್ಮಸಿದ್ಧ ಹಕ್ಕು ನನ್ನ ಆಹಾರ ನೀನು ಕಸಿದುಕೊಂಡರೆ ಅದು ಪಾಪವಾಗದೇ? ಒಂದು ಪ್ರಾಣವನ್ನು ಉಳಿಸ ಹೊರಟ ನೀನು ನನ್ನ ಇಡೀ ಕುಟುಂಬದ ಪ್ರಾಣದ ಬಗೆಗೆ ಯೋಚಿಸಿರುವೆಯಾ? : ಈ ದಿನ ಈ ಪಾರಿವಾಳ ಕೈತಪ್ಪಿತು ಪ್ರತಿದಿನ ಹೀಗೆಯೇ ನಡೆದರೆ, ನಮ್ಮ ಪ್ರಾಣದ ಗತಿಯೇನು? ಅಲ್ಲದೇ, ಒಂದು ಪ್ರಾಣಿಗೆ ಇನ್ನೊಂದು ಪ್ರಾಣಿಯೇ ಆಹಾರ ಇದು ಪ್ರಕೃತಿ ನಿಯಮ ಆದುದರಿಂದ ನನ್ನ ಆಹಾರ ನನಗೆ ಹಿಂದಿರುಗಿಸುವುದೇ ಸರಿಯಾದ ಧರ್ಮ ವಿಚಾರ ಮಾಡು ಧರ್ಮದ ಮರ್ಮವೆಲ್ಲ ತಿಳಿದ ನಿನಗೆ ಹೇಳುವುದೇನಿದೆ? ನರಿವೃಧಾ ಚರ್ಚೆ ಏಕೆ? ನನಗೆ ದಕ್ಕಬೇಕಾದ ಇಂದಿನ ನನ್ನ ಬೇಟೆಯನ್ನು ನನಗೆ ನೀಡು ಗಿಡುಗ ಹೇಳಿತು