ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

28 ನಂದೇಶದ ಕಥೆಗಳು ವೀರಮಾತೆ “ಧಡ್ ಧಡ್ ಧಡ್ ” ಎಷ್ಟು ಬಂದರೂ ಬಾಗಿಲು ತೆರೆಯುತ್ತಿಲ್ಲ ಹಿಂದೆ ವೈರಿಗಳು ಬೆನ್ನಟ್ಟಿ ಬರುತ್ತಿರುವರು ಏನು ಮಾಡುವುದು? ತಿಳಿಯುತ್ತಿಲ್ಲ ಪ್ರಾಣ ಉಳಿಸಿಕೊಳ್ಳುವ ಬೇರಾವ ಮಾರ್ಗವೂ ತೋಚುತ್ತಿಲ್ಲ ಮತ್ತೆ ಜೋರಾಗಿ ಕೂಗಿದ ಕೋಟೆಯ ಮೇಲುಗಡೆ ಅವನ ತಾಯಿ ಕಂಡಳು ಹೋದ ಜೀವ ಮರಳಿ ಬಂದಂತಾಯಿತು ಅವಳಲ್ಲಿ ಕೋಟೆಯ ಬಾಗಿಲು ಬೇಗ ತೆರೆಯಲು ಬೇಡಿದ ಆ ರಾಜಕುಮಾರನ ತಾಯಿ ಅಚಲಳಾಗಿದ್ದಳು ಈ ಮಗ ಮತ್ತೆ ವರಿ- ವರಿಯಾಗಿ ಬೇಡಿಕೊಂಡ, ಅಂಗಲಾಚಿದ ಆದರೆ, ಆ ತಾಯಿಯ ಮನಕರಗಲಿಲ್ಲ ಬಾಗಿಲು ತೆರೆಯಲಿಲ್ಲ ಅವಳು ಕೂಗಿ ಹೇಳಿದಳು ಶತ್ರುಗಳಿಗೆ ಅಂಜಿ ಓಡಿ ಬರುವ ನೀನು ನನ್ನ ಮಗನೇ ಅಲ್ಲ ನನಗೆ ಮಗನಿರದಿದ್ದರೂ ಚಿಂತೆಯಿಲ್ಲ ಇಂತಹ ಹೇಡಿ ಮಗ ನನಗೆ ಬೇಡ | ಹೋಗು ಹೊರಟು ಹೋಗು ನಿನಗೆ ಈ ಅರಮನೆಗೆ ಪ್ರವೇಶವಿಲ್ಲ' ಕೋಟೆಯ ಕಬ್ಬಿಣದ ಬಾಗಿಲುಗಳಷ್ಟೇ ಅವಳ ಹೃದಯದ ಬಾಗಿಲುಗಳೂ ಗಟ್ಟಿಯಾಗಿದ್ದವು ಆ ನಿಷ್ಠುರ ಮಾತಿಗೆ ಮಗ ಬೇಸರಗೊಂಡು ಜೀವನದ ಬಗ್ಗೆ ತಾತ್ಕಾರ ತಳೆದ ಅವನ ನೋಟ ಹಿಂದಕ್ಕೆ ತಿರುಗಿತು ದೂರದಲ್ಲಿ ಬೆನ್ನಟ್ಟಿಬರುತ್ತಿರುವ ಶತ್ರು ಸೈನ್ಯದತ್ತನೋಡಿದ ಅವರತ್ತ ತನ್ನ ಕುದುರೆಯನ್ನೋಡಿಸಿದ ಎರಗಿದ ಪ್ರಾಣ ಲೆಕ್ಕಿಸದೇ ಹೋರಾಡಿದ ಶತ್ರುಗಳ ಮಣ್ಣುಮುಕ್ಕಿಸಿದ ವಿಜಯದ ವತಾಕೆ ಹಿಡಿದು ಅರಮನೆಗೆ ಹಿಂದಿರುಗಿದ ಈಗ ಕೋಟೆಯ ಬಾಗಿಲು ತೆರೆದಿದೆ ಅವನನ್ನು ಸ್ವಾಗತಿಸಲು ಇಡೀ ಊರಿಗೆ ಊರೇ ತಳಿರು-ತೋರಣ ಹೊತ್ತು ಕಾಯುತ್ತಿತ್ತು ಮಗನನ್ನು