ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು 29 ಎದಿರುಗೊಳ್ಳಲು ತಾಯಿಯೇ ಆರತಿ ಹಿಡಿದು ನಿಂತಿದ್ದಳು. ರಣರಂಗದಲ್ಲಿ ಹೋರಾಡಿ ಜಯಗಳಿಸಿ ಬಂದ ಕೆಚ್ಚೆದೆಯ ವೀರಪುತ್ರನ ತಾಯಿಯೆಂಬ ಹೆಮ್ಮೆ ಅವಳ ಮೊಗದಲ್ಲಿ ಕಾಣುತ್ತಿತ್ತು - ಇದು ಶ್ರೀಕೃಷ್ಣನ ಮೂಲಕ ಪಾಂಡವರಿಗೆ ಕುಂತಿ ನೀಡಿದ ಸಂದೇಶ. ತಾಯಿ ತನ್ನ ಮಕ್ಕಳಿಗೆ ನೀಡಿದ ಕರ್ತವ್ಯ ಜಾಗೃತಿಯ ನಿಷ್ಠುರ ಸಂದೇಶ!! -ಮಹಾಭಾರತ. ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ತುಂಬ ಹಿರಿದು. ಮಕ್ಕಳನ್ನು ನಿಷ್ಠುರತೆಯಿಂದಲಾದರೂ, ಸನ್ಮಾರ್ಗದಲ್ಲಿ ತೊಡಗಿಸುವ ಜವಾಬ್ದಾರಿ ತಾಯಿಯದೇ ಆಗಿದೆ. ಇದನ್ನು ಇಂದಿನ ನಮ್ಮ ತಾಯಂದಿರು ಮನಗಾಣಬೇಕು. ಸುಸಂಸ್ಕೃತ ಮಕ್ಕಳು, ತಾಯಿ ದೇಶಕ್ಕೆ ನೀಡುವ ದೊಡ್ಡ ಕೊಡುಗೆ ; ಸಂಪತ್ತು