ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

30 ಸಂದೇಶದ ಕಥೆಗಳು ಅನ್ನದ ಪರಿಣಾಮ ಮಹಾಭಾರತ ಸಂಗ್ರಾಮ ಮುಗಿದಿದೆ ಹದ್ದು-ನರಿ-ನಾಯಿಗಳಿಂದ ತುಂಬಿದ ಭೀಕರ ರಣಾಂಗಣದ ನಡುವೆ ಕುರುಕುಲದ ಹಿರಿಯ ತಲೆ ಪಿತಾಮಹ ಭೀಷ್ಠ ಶರಮಂಚದಲ್ಲಿ ಮಲಗಿದ್ದಾರೆ ಮರಣಕ್ಕಾಗಿ ಉತ್ತರಾಯಣದ ನಿರೀಕ್ಷೆಯಲ್ಲಿದ್ದಾರೆ ಚಕ್ರವರ್ತಿ ಧರ್ಮರಾಜ, ಧರ್ಮದ ಮರ್ಮ ತಿಳಿಯಲು, ಭೀಷ್ಮರಲ್ಲಿಗೆ ತನ್ನೆಲ್ಲ ಬಳಗದ ಜೊತೆ ಬಂದಿದ್ದಾನೆ ಬಹಳ ಹೊತ್ತು ಪ್ರಶೋತ್ತರ ಚರ್ಚೆ ನಡೆಯುತ್ತವೆ ಕೊನೆಗೆ ಅಲ್ಲಿಯೇ ಇದ್ದ ದೌಪದಿ ನಗುತ್ತಾ ವ್ಯಂಗ್ಯವಾಡುತ್ತಾಳೆ “ಭೀಷ್ಠರೇ ಧರ್ಮದ ಬಗ್ಗೆ ಇಷ್ಟೊಂದು ಧಾರಾಳವಾಗಿ ಉವದೇಶ ನೀಡುವ ಈ ತಮ್ಮ ಧರ್ಮಪ್ರಜ್ಞೆ ಮ್ಯೂತದ ಸಭೆಯ ಸಮಯದಲ್ಲಿ ಏಕೆ ಮಂಕಾಗಿತ್ತು? ಆಗ ಅಲ್ಲಿ ನಡೆದ ಅನ್ಯಾಯವನ್ನು ಕಿಂಚಿತ್ತೂ ಪ್ರತಿಭಟಿಸಿದ ನಿಮ್ಮ ಧರ್ಮಜ್ಞಾನ ಬೆಲೆ ಇದೆಯೆ?' ದೌಪದಿಯ ಈ ದಿಟ್ಟ ಪ್ರಶ್ನೆಗೆ ಭೀಷರು ತುಂಬು ಗಾಂಭೀರ್ಯದಲ್ಲಿ ಶಾಂತವಾಗಿ ಉತ್ತರಿಸಿದರು 'ಮಗಳೇ! ದೌವದಿ! ಇದೆಲ್ಲ ಆಹಾರದ ವರಿಣಾಮವಮ್ಮ | ದುರ್ಯೊಧನನ ಮನೆಯ ಅನ್ನದ ಪ್ರಭಾವ ಆ ಪಾವದ ರಕ್ತನನ್ನ ಬುದ್ದಿಗೆ ತುಕ್ಕು ಹಿಡಿಸಿತ್ತು ದುಷ್ಟ ಆಹಾರದಿಂದ ಉಂಟಾದ ಮನೋವೃತ್ತಿಯ ಅಬ್ಬರದಲ್ಲಿ ಧರ್ಮದ ದನಿ ಅಡಗಿಹೋಗಿತ್ತು ಋಣವ್ರಜ್ಞೆ ಧರ್ಮಪ್ರಜ್ಞೆಯನ್ನು ದೂರಮಾಡಿತ್ತು ಈಗ ಆ ಋಣದ ರಕ್ತ ನನ್ನ ಮೈಯಿಂದ ಸೋರಿ ಹೋಗಿದೆ ನಾನೀಗ ಪರಿಶುದ್ಧನಾಗಿದ್ದೇನೆ' ಶುದ್ಧತೆಯನ್ನು ಗಮನಿಸದೇ ನಾವು ಸ್ವೀಕರಿಸುವ ಆಹಾರ ನಮ್ಮ ಮನಸ್ಸಿನ ಮೇಲೆ ಬೀರುವ ಪ್ರಭಾವದ ಬಗೆಗೆ ನಾವು ಗಂಭೀರವಾಗಿ ಯೋಚಿಸುವಂತೆ ಮಾಡುವ ಮನೋಜ್ಞ ಕತೆಯಿದು