ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

32 ನಂದೇಶದ ಕಧೆಗಳು ಮನೆಗೆ ಬಂದ ಋಷಿಕುಮಾರನನ್ನು ರಾಜ ನತ್ಕರಿಸಿದ ಬಂದ ಕಾರಣ ಕೇಳಿದ ಬಯಸಿ ಬಂದುದನ್ನು ನೀಡುವುದಾಗಿ ಆಶ್ವಾಸನೆ ನೀಡಿದ ದಾನವಾಗಿ ಬೇಡಿದ್ದನ್ನು ತಪ್ಪದೇ ಕೊಡಬೇಕೆಂದು ರಾಜನಿಂದ ಮಾತು ದಡೆದ ಲಿಖಿತ ನಡೆದ ವೃತ್ತಾಂತವನಲ್ಲ ರಾಜನಿಗೆ ಹೇಳಿ ತನಗೆ ತಕ್ಕ ಶಿಕ್ಷೆ ನೀಡಬೇಕೆಂದ ರಾಜನಿಗೆ ಗೊಂದಲ ಗಾಬರಿಗಳಾದವು ರಾಜ ನಾಕಷ್ಟು ಸಮಾಧಾನ ಹೇಳಿದ ಲಿಖಿತ ಕೇಳಲಿಲ್ಲ 'ಈ ನನ್ನ ಅಪರಾಧಕ್ಕೆ ನಿಮ್ಮ ಆಡಳಿತದಲ್ಲಿ ಯಾವ ಶಿಕ್ಷೆ?” ಎಂದು ಕೇಳಿದ ರಾಜ ನಂಕೋಚದಲ್ಲಿ ಉತ್ತರಿಸಿದ ಈ ತರಹ ಅಪರಾಧಕ್ಕೆ ನಾವು ಕೈಗಳನ್ನು ತುಂಡರಿಸುತ್ತೇವೆ' “ಸರಿ ಹಾಗಾದರೆ ! ನನ್ನ ಕೈಗಳನ್ನು ತುಂಡರಿಸಿ ನನಗೆ ಶಿಕ್ಷೆ ನೀಡಿದರೆ ಮಾತ್ರ ನಾನು ಇಲ್ಲಿಂದ ಹೋಗುತ್ತೇನೆ ಇಲ್ಲವಾದರೆ, ನೀನು ಮಾತಿಗೆ ತಪ್ಪಿದಂತೆ ! ಜೋಕೆ' ರಾಜನಿಗೆ ಉಭಯ ನಂಕಟ ಮನಸ್ಸಿಲ್ಲದೇ ಭಟರಿಗೆ ಲಿಖಿತನ ಇಚ್ಛೆ ಪೂರೈಸುವಂತೆ ಹೇಳಿ ಕಳಿಸಿದ ಹೀಗೆ ರಾಜನಿಂದ ಶಿಕ್ಷೆ ಪಡೆದು ಕೈ ಕಳೆದುಕೊಂಡು ಮುಂಡನಾಗಿ ಬಂದ ತಮ್ಮನನ್ನು ಕಂಡ ಶಂಖನಿಗೆ ದುಃಖವಾಯಿತು ಆದರೆ, ಅವನ ಪ್ರಾಮಾಣಿಕತೆಗೆ ಹೆಮ್ಮೆಯಾಯಿತು ಶಂಖ ತಮ್ಮನನ್ನು ಪ್ರೀತಿ ವಿಶ್ವಾನಗಳಿಂದ ಎದಿರುಗೊಂಡ. ಹತ್ತಿರದ ನದಿಯಲ್ಲಿ ಸ್ನಾನ ಮಾಡಿ ಬರಲು ಹೇಳಿದ ಸ್ನಾನಕ್ಕಾಗಿ ನದಿಯಲ್ಲಿ ಮುಳುಗಿ ಮೇಲೆದ್ದ ಲಿಖಿತನ ಕೈಗಳು ಮತ್ತೆ ಚಿಗುರಿದ್ದವು ಲಿಖಿತ ಶಿಕ್ಷೆ ಪಡೆದು ಪುನೀತನಾಗಿದ್ದ ಈಗ ಮತ್ತೆ ಕಡಿದ ಕೈಗಳನ್ನು ಹಿಂದೆ ನಡೆದು ಪ್ರಾಮಾಣಿಕತೆಯ ಫಲ ಪಡೆದಿದ್ದ