ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು 33 ಇದು ಯುಧಿಷ್ಠಿರನಿಗೆ ವ್ಯಾಸರು ಹೇಳಿದ ಕತೆ, ಪ್ರಾಮಾಣಿಕತೆಯ ಕರ್ತವ್ಯನಿಷ್ಠೆಯ ಬೆಲೆ ಹೇಳುವ ಕತೆ. ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುವ ಕತೆ! ಭಗವಂತನ ವಶಕ್ಕೆ ಒಳಪಟ್ಟ ಈ ಜಗದ ಪದಾರ್ಥಗಳನ್ನೆಲ್ಲ ನಮ್ಮದೇ ಎಂಬಂತೆ ಭಗವಂತನ ಮಾತು ಕೇಳದೇ ಸ್ವಕರ್ತವ್ಯವನ್ನು ಮಾಡದೇ, ಅವನಲ್ಲಿ ಅರ್ಪಿಸದೇ, ಭೋಗಿಸುವ ನಮ್ಮಲ್ಲಿ ಶಿಕ್ಷೆ ಕೇಳಿ ಪಡೆಯುವುದಿರಲಿ, ಅಪರಾಧವನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆಯಾದರೂ ಇದೆಯೇ? ಅಷ್ಟೇ ಅಲ್ಲದೆ, ಎಷ್ಟು ದೊಡ್ಡ ಅಪರಾಧಗೈದರೂ ಲಂಚ ಆಮಿಷ ನೀಡಿ, ನ್ಯಾಯಾಲಯದಿಂದಲೇ ನಿರಪರಾಧಿಗಳೆಂದು ಸಾಬೀತುಪಡಿಸುವ ನಮ್ಮ ವಂಚನೆಯ ಪ್ರವೃತ್ತಿ ತಲೆ ತಗ್ಗಿಸುವಂತಹದು. ಸ್ವಾರ್ಥ-ಪ್ರತಿಷ್ಠೆಗಳಿಗಾಗಿ ಯಾವುದಕ್ಕೂ ಹೇಸದ ನಾವು ಆತ್ಮವಂಚಕ ನಾಗರಿಕರು ! ಮಹಾಭಾರತಕ್ಕೂ ನಮಗೂ 5000 ವರ್ಷಗಳ ಅಂತರವಾದರೆ, ಮಹಾಭಾರತದ ಆದರ್ಶಕ್ಕೂ ನಮಗೂ 10,000 ವರ್ಷಗಳ ಅಂತರ !! ಮಹಾಭಾರತ