ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

34 ಸಂದೇಶದ ಕಥೆಗಳು ಸಿದ್ದಿಯ ರಹಸ್ಯ ದಾರಿಯಲ್ಲಿ ಹೋಗುವ ಜನರೆಲ್ಲ ಅವನನ್ನೇ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು ಮಧ್ಯಾಹ್ನದ ಉರಿಬಿಸಿಲು, ಅವನು ನಡೆಯುತ್ತಿದ್ದ ಅವನ ತಲೆಯ ಮೇಲೆ ಬಾನಿನಲ್ಲಿ ಛತ್ರವೊಂದು ಮೆಲ್ಲನೆ ನೆರಳ ನೀಡುತ್ತಾ ಸಾಗುತ್ತಿತ್ತು ಅಕ್ಕಪಕ್ಕದಲ್ಲಿ ಚಾಮರಗಳು ತಾವೇ ಬೀಸುತ್ತಿದ್ದವು ಅವನಿಡುವ ಹೆಜ್ಜೆಗಳಿಗೆ ದಾರಿಯಲ್ಲಿ ಮೆದು ಹುಲ್ಲಿನ ಹಾಸು ಹುಟ್ಟುತ್ತಿತ್ತು ಕಂಪಿನ ಹೂಗಳು ಹರಡುತ್ತಿದ್ದವು ಅವನ ಮುಖ ಅಹಂಭಾವದಿಂದ ಬೀಗುತ್ತಿತ್ತು ಇಕ್ಕೆಲೆಗಳಲ್ಲಿ ನೆರೆದ ಜನರತ್ತ ಜಂಬದ ನೋಟ ಬೀರುತ್ತ ಅವ ನಾಗುತ್ತಿದ್ದ ತಟ್ಟನೆ ಅವನಿಗೆ ಎಚ್ಚರವಾಯಿತು ಇಂತಹ ಸಿದ್ದಿಗಳನ್ನು ಕೈವಶ ಮಾಡಿಕೊಳ್ಳುವ ಹಗಲುಗನಸು ಕಾಣುತ್ತಿದ್ದ ಅವನು

      • ಅವನೊಬ್ಬ ಬ್ರಾಹ್ಮಣಕುವರ ಹೆಸರು 'ಕೌಶಿಕ' ಅವನಿಗೆ ದೇವರನ್ನು ಕಾಣುವ ಹಂಬಲ, ಸಿದ್ದಿಗಳ ಹುಚ್ಚು ಬಯಕೆ ಮನೆಯಲ್ಲಿ ಮುಪ್ಪಿನ ತಂದೆ-ತಾಯಿ ಅವನಿಗೆ ಅಡ್ಡಿ ಅವರೆಂದರೆ ಅವನಿಗೆ ಅಸಡ್ಡೆ ತನ್ನ ಹಿರಿದಾದ ಗುರಿಯ ದಾರಿಗೆ ಅವರೊಂದು ಮುಳ್ಳೆಂದು ಅವನ ಭಾವನೆ!!

ಅದಕ್ಕೆಂದೇ ಅವರನ್ನು ಕಡೆಗಣಿಸಿ, ದೇವರನ್ನು ಅರಸಿ, ಕಾಡಿಗೆ ತೆರಳಿದ ನದೀತೀರದ ಪ್ರಶಾಂತ ಪರಿಸರ ಆರಿಸಿಕೊಂಡು, ನಿದ್ದೆ - ನೀರು - ಆಹಾರ - ವಿಹಾರವನ್ನೆಲ್ಲ ತೊರೆದ ಅಖಂಡ ಧ್ಯಾನದಲ್ಲಿ ಮುಳುಗಿದ ಹೊರಜಗದ ಪರಿವೆಯಿಲ್ಲದ ಅವನ ತಪ ನಾಗಿತ್ತು ಕಾಲ ಉರುಳಿತು ಕೊನೆಗೊಮ್ಮೆ ಏಕಾಗ್ರ- ಉಗ್ರ ತಪಸ್ಸಿಗೆ ಮಂತ್ರಗಳು ವರ ನೀಡಿದವು ಸಿದ್ದಿಗಳು ಕೈವಶವಾದವು 'ಕೌಶಿಕ' ಬಯಸಿದರೆ ನಾಕು ಆ ಎಲ್ಲ ಅವನ ಬೇಕು'ಗಳು