ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕರೆಗಳು ಅವನಡಿಗೆ ಬೀಳುತ್ತಿದ್ದವುಅವನು ಸಿದ್ಧವುರುಷನಾದ ಅವನ ತವಃಪ್ರಭಾವದ ಜೊತೆ ಅವನ ಜಟೆ- ಗಡ್ಡಗಳೂ ಬೆಳೆದವು ಅಹಂಕಾರವೂ ಬೆಳೆಯಿತು!

      • ಕೌಶಿಕ ತಪಗೈಯುವ ಸ್ಥಳದಲ್ಲಿ ಒಂದು ದೊಡ್ಡ ಆಲದಮರ ಅದರಲ್ಲೊಂದು ಜೋಡು ಹಕ್ಕಿಯ ಗೂಡು

ಆ ದಿನ ಕೌಶಿಕ ದೀರ್ಘ ಧ್ಯಾನದಲ್ಲಿ ತೊಡಗಿದ್ದ ಹಕ್ಕಿಯ ಗೂಡಿನಿಂದ ಅವನ ಮೇಲೆ ಕೊಳೆ ಬಿದ್ದಿತು ಅವನಿಗೆ ಪಿತ್ತ ನೆತ್ತಿಗೇರಿತು ತನ್ನಂತಹ ಮಹಾತವಸ್ವಿಯ ಮೇಲೆ ಅಶುದ್ದಿ ಮಾಡುವುದೆಂದ ರೇನು? ಧ್ಯಾನದಲ್ಲಿರುವಾಗ ಮೈಲಿಗೆ ಮಾಡುವುದೆಂದರೇನು? ಅವರಾಧಿ ಗಳನ್ನು ಸುಮ್ಮನೆ ಬಿಡಲಾರೆ ಎಂದುಕೊಳ್ಳುತ್ತಾಕೌಶಿಕ ಹಕ್ಕಿಯತ್ತ ಕೆಂಗಣ್ಣು ಬೀರಿದ - ಮರುಕ್ಷಣ ಗಂಡು ಹಕ್ಕಿ ಉರಿಯುತ್ತಾ ನೆಲಕ್ಕೆ ಬಿದ್ದು ಬೂದಿಯಾಯಿತು ಅದನ್ನು ಕಂಡು ಹೆಣ್ಣು ಹಕ್ಕಿ ಚೀತ್ಕಾರ ಮಾಡುತ್ತಾ ದುಃಖದಿಂದ ಒದ್ದಾಡಿ ಪ್ರಾಣ ಬಿಟ್ಟಿತು ಆಗ ಕೌಶಿಕನ 'ಅಹಂ' ತೃಪ್ತಿಯಿಂದ ಶಾಂತವಾಯಿತು ಅವನಿಗೆ ತನ್ನ ತಪಃಶಕ್ತಿಯ ಬಗೆಗೆ ಮತ್ತಷ್ಟೂ ಹಮ್ಮು ಬೆಳೆಯಿತು

      • ಈ ದಿನ ಹೊಳೆಯಲ್ಲಿ ಮಿಂದ ನಂತರ ಅವನ ಬಟ್ಟೆಗಳು ಒಣಗಲಿಲ್ಲ ಅವನೆಣಿಸಿದಂತೆ ಗಾಳಿ ಬೀಸಲಿಟ್ಟ ದಾರಿಯಲ್ಲಿ ಹುಲ್ಲಿನ ಹಾನು ಹುಟ್ಟಲಿಲ್ಲ ಅವನಿಗೆ ದಿಮೆಯಾಯಿತು ಮುಖ ಕಳೆಗುಂದಿತು ಅವನು ಚಿಂತೆಗೀಡಾದ ಮನದಲ್ಲಿ ಏಕಾಗ್ರತೆಯೇ ಇಲ್ಲ ನಾಲಿಗೆ ತೊದಲುತ್ತಿದೆ, ಮಂತ್ರಗಳು ಮರೆಯುತ್ತಿವೆ, ಮೈ ನಡುಗುತ್ತಿದೆ ಬಾಯಾರಿ ನೀರಡಿಕೆಯಾಯಿತು ಹಸಿವೆಯಾಯಿತು