ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

36 ಸಂದೇಶದ ಕಧೆಗಳು ಇಂದು ಅವನು ಬಯಸಿದಂತೆ ಆಹಾರನಾಮಗ್ರಿ ಒದಗಿ ಬರಲಿಲ್ಲ “ಏಕೆ ಹೀಗಾಯಿತು? ನನ್ನ ತವಃ ಪ್ರಭಾವ ಎಲ್ಲಿ ಹೋಯಿತು?” ಅವನಿಗೆ ದಿಕ್ಕೇ ತೋಚಲಿಲ್ಲ ಚಿಂತೆ- ಅಸಹನೆ-ಕೋವದಲ್ಲೇ ಹತ್ತಿರದ ಹಳ್ಳಿಯತ್ತ ಹೆಜ್ಜೆ ಹಾಕಿದ.

      • ಅದೊಂದು ಸದೃಹಸ್ಥನ ಮನೆ, ಹಸಿದು ಕಂಗಾಲಾದ ಕೌಶಿಕ ಮನೆಯಂಗಳದಿ ಬಂದು ನಿಂತ ಮನೆಯೊಡತಿ ಅವನಿಗೆ ಭಿಕ್ಷೆ ನೀಡುವುದಾಗಿ ಹೇಳಿ ಒಳನಡೆದಳು ಕೆಲ ನಿಮಿಷಗಳು ಕಳೆದವಷ್ಟೆ! ಕೌಶಿಕ ಚಡಪಡಿಸಿದ ಸ್ವಲ್ಪ ಸಮಯ ಕಳೆಯಿತು ಮನೆಯೊಡತಿ ಹೊರ ಬರಲಿಲ್ಲ! ಕೌಶಿಕನಿಗೆ ಒಂದೊಂದು ಕ್ಷಣವೂ ಯುಗವಾಯಿತು ಅತ್ತಿತ್ತಶತವಧಗೈದ “ತನ್ನಂತಹ ಮಹಾನ್ ತವಸ್ವಿ- ಬ್ರಾಹ್ಮಣ ಮನೆಯೆದುರು ಹಸಿದು ಭಿಕ್ಷೆಗಾಗಿ ನಿಂತಾಗ ಹೊರಬರದೇ ವಿಳಂಬ ಮಾಡುತ್ತಾ ಕಾಯಿಸುತ್ತಿರುವುದು ಸಣ್ಣ ಅವರಾಧವೇ? ಮನಸ್ಸು ವ್ಯಗ್ರವಾಯಿತು ಉದ್ವಿಗ್ನತೆಯಿಂದ ಹುಂಕರಿಸಿದ ಕೂಗಿದ ಕೊನೆಗೆ ಮನೆಯೊಡತಿ ಭಿಕ್ಷಾಪಾತ್ರೆಯೊಡನೆ ಹೊರಬಂದಳು ಕೋವದಲ್ಲಿ ಭುಸುಗುಡುತ್ತಿದ್ದ ಮುನಿಯ ಬಳಿ ಬಂದು ತಣ್ಣೀರು ನೀಡಿದಳು

“ಮನೆಯೊಳಗೆ ನನ್ನ ಪತಿಯ ಭೋಜನ ನಡೆದಿತ್ತು ಮಗುವಿನ ಆರೈಕೆ ಮಾಡಬೇಕಿತ್ತು ಅದಕ್ಕಾಗಿ ತಮಗೆ ಭಿಕ್ಷೆ ನೀಡುವಲ್ಲಿ ವಿಳಂಬವಾಯಿತು ತಾವು ದಯಮಾಡಿ ಕ್ಷಮಿಸಿ ಭಿಕ್ಷೆ ಸ್ವೀಕರಿಸಬೇಕು' ಅವನ ಮಾತಿನಲ್ಲಿ ನಮ್ರತೆಯ ಪ್ರಾರ್ಥನೆಯಿತ್ತು ಕೌಶಿಕನ ಕೋವದ ಉರಿ ಆರಲಿಲ್ಲ ಆ ಗೃಹಿಣಿಯತ್ತ ಕೆಂಗಣ್ಣ ಬೀರಿದ “ಬಾಗಿಲ ಬಳಿ ಹಸಿದು ಕಾಯುತ್ತಿರುವ ನನ್ನಂತಹ ಅತಿಧಿಗಿಂತ ಹೆಚ್ಚಾಯಿತೇ ನಿನ್ನ ಮನೆಗೆಲಸ? ನಾನು ಯಾರೆಂದು ತಿಳಿದಿರುವೆ? ನನ್ನ ತವಃಶಕ್ತಿಯ ಅರಿವು ನಿನಗಿದ್ದಂತಿಲ್ಲ ವಾವ ನಿನಗೇನು ಗೊತ್ತು? ನನ್ನಂತಹ ತಪಸ್ವಿಗಳ ಪ್ರಭಾವ! ನಾನು ಮನಸ್ಸು ಮಾಡಿದರೆ ನಿನ್ನನ್ನು ಈ ಕ್ಷಣ ”