ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಧೆಗಳು 3? 'ಸುಟ್ಟು ಬಿಡುವಿರಾ? ಅವಳು ಅವನ ಮಾತನ್ನು ತುಂಡರಿಸಿದಳು “ಅಯ್ಯೋ! ತವಸ್ವಿ! ಒಂದೇ ಕ್ಷಣದಲ್ಲಿ ನಿನ್ನ ಕೆಂಗಣ್ಣನೋಟದಿಂದ ಸುಟ್ಟುಹೋಗಲು ನಾನೇನು ಹಕ್ಕಿಯಲ್ಲಿ ತಿಳಿಯಿತೇ? ಕೌಶಿಕನಿಗೆ ಅಚ್ಚರಿಯಾಯಿತು ಕೋವವೆಲ್ಲ ಜಗ್ರನೇ ಇಳಿಯಿತು ಕಾಡಿನಲ್ಲಿ ನಡೆದ ಘಟನೆ ಇವಳಿಗೆ ಹೇಗೆ ತಿಳಿಯಿತು. ಅವನಿಗೆ ಮಾತೇ ಹೊರಡಲಿಲ್ಲ “ಅಯ್ಯೋ! ಕೌಶಿಕಃ ನಿನ್ನನ್ನು ನೀನು ಮಹಾತಪಸ್ವಿಯಂದು ತಿಳಿದಿರಬಹುದು ನೀನು ಗಳಿಸಿದ ಸಿದ್ದಿಗಳು ಓರ್ವ ಮಾಂತ್ರಿಕ ಮಾಡುವ ಯಕ್ಷಿಣಿಯ ತಂತ್ರಿಗಳು ಅದಕ್ಕಿಂತ ಹೆಚ್ಚೇನು ಗಳಿಸಿರುವೆ? ಮನೆಯಲ್ಲಿ ವಯಸ್ಕಾದ ತಂದೆ-ತಾಯಿಗಳ ತೊರೆದು, ಕಾಡಿಗೆ ಹೋದ ನಿನಗೆ ದೇವರು ದೊರಕಿದನೇ? ತವಸ್ಸು ಅದರಿಂದ ವಡೆದ ಅಲ್ಪಸ್ವಲ್ಪ ಸಿದ್ದಿಯಲ್ಲೇ ಮೈಮರೆತೆ ಸಿದ್ಧಿಗಳ ಆಮಿಷಕ್ಕೆ ಬಲಿಯಾದೆ ಹೊರಗೆಲ್ಲ ಶುದ್ಧನಾಗಿ ಮನದೊಳಗೆಲ್ಲ ಮೈಲಿಗೆ ಬೆಳೆಸಿದೆ ತಪಸ್ಸಿನಿಂದ ಅಮಾಯಕ ಹಕ್ಕಿಯನ್ನು ಸುಟ್ಟೆ ನಿನ್ನೊಳಗಿನ ಕಾಮ-ಕ್ರೋಧಗಳನ್ನು ಸುಡಲಾಗಲಿಲ್ಲ ನಿನಗೆ ಉಪದೇಶಿಸಲು ನನಗೆ ನಮಯವೂ ಇಲ್ಲ ನಾನು ಅಷ್ಟು ಹಿರಿಯಳೂ, ತಿಳಿದವಳೂ ಅಲ್ಲ ಇಗೋ, ಈ ಭಿಕ್ಷೆ ಸ್ವೀಕರಿಸು ಮನೆಗೆ ಬಂದ ನಿನ್ನ ಆತಿಧ್ಯದಲ್ಲಿ ವಿಳಂಬವಾದುದಕ್ಕೆ ಕ್ಷಮೆ ಇರಲಿ ಎಂದು ಶಾಂತವಾಗಿ ನುಡಿದಳು ಈ ಮಾತುಗಳನ್ನು ಕೇಳಿ ಕೌಶಿಕ ಮತ್ತೂ ಚಕಿತನಾದ ಅವನ 'ಅಹಂ' ಕರಗಿತು ಕಾಡಿನಲ್ಲಿ ತನಗೈದು ಗಳಿಸಲಾಗದ ಈ ಅಪರೋಕ್ಷ ದೃಷ್ಟಿಯ ಸಿದ್ದಿ ಈ ನಾಧಾರಣ ಹೆಂಗಸಿಗೆ ಹೇಗೆ ಬಂತು? ಅಮ್ಮ ! ನಿನ್ನ ಮಾತು ಕೇಳಿ ನನಗೆ ತುಂಬ ಆಶ್ಚರ್ಯವಾಗುತ್ತಿದೆ ನಿಜ ಹೇಳು ಕಾಡಿನಲ್ಲಿ ವೃದ್ಧ ತಪಸ್ವಿಗಳಿಗೂ ದೊರೆಯದ ಈ