ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

38 ಸಂದೇಶದ ಕಧೆಗಳು ಅಪರೋಕ್ಷವಿದ್ಯೆ ನಿನಗೆ ಹೇಗೆ ಬಂತು? ಎಲ್ಲಿಂದ ಬಂತು? ಈ ರಹಸ್ಯ ಹೇಳಿದರೆ ಮಾತ್ರ ನಾನು ತೃಪ್ತಿಯಿಂದ ಹಿಂದಿರುಗುವೆ ಎಂದು ವಟ್ಟುಹಿಡಿದ ಅದನ್ನು ಕೇಳದ ಅವಳು ನಸುನಗುತ್ತಾ “ನಾನೇನು ದೊಡ್ಡ ತವಸ್ವಿಯಲ್ಲ! ಅದಾವ ಸಿದ್ಧಿಗಾಗಿ ಪ್ರಯತ್ನಿಸಿ ಗಳಿಸಿಯೂ ಇಲ್ಲ ನಿನ್ನ ಕಂಡಾಗ ನನ್ನ ಮನದಲ್ಲಿ ಬಂದುದನ್ನು ಹೇಳಿದೆ ಅಷ್ಟೆ ! ನಿನ್ನೆಲ್ಲ ಪ್ರಶ್ನೆಗಳಿಗೆ ಉತ್ತರಬೇಕೆಂದರೆ, ವೇಟೆಯಲ್ಲಿ 'ಅದ್ರೋಹಕ' ಎಂಬ ಬೇಡನೋರ್ವ ಇದ್ದಾನೆ ಅವನಲ್ಲಿ ಹೋಗು ನಿನ್ನೆಲ್ಲ ಪ್ರಶ್ನೆಗಳಿಗೆ ಅಲ್ಲಿದೆ ಉತ್ತರ' ಇಷ್ಟು ನುಡಿದು ಅವಳು ಮನೆಯೊಳಕ್ಕೆ ನಡೆದಳು ಕೌಶಿಕ ಅವಳನ್ನು ತಡೆದು ನಿಲ್ಲಿಸಿದ ಅವಳ ಅಡಿಗೆ ಬಿದ್ದು ನಮಿಸಿದ ಅಲ್ಲಿಂದ ಬೇಡನ ಮನೆ ಅರಸಿ ಹೊರಟ

      • ಮನೆಯೆದುರು ತೂಗುಬಿಟ್ಟ ಪ್ರಾಣಿಗಳ ಮಾಂಸ, ಒಣಗಲು ಬಿಸಿಲಿಗೆ ಹರಡಿದ್ದ ಚರ್ಮಗಳು, ಹೊಟ್ಟೆಯೆಲ್ಲ ತೊಳಸುವ ಅಸಹ್ಯ ವಾಸನೆ ಇವೆಲ್ಲ ಬೇಡನ ಮನೆಯೆಂದು ಸಾರಿ ಹೇಳುತ್ತಿದ್ದವು ಒಳಗೆ ಕಾಲಿಡಲು ಕೌಶಿಕ ಹಿಂಜರಿದ ಅಷ್ಟರಲ್ಲೇ, ಅವನನ್ನು ನೋಡಿದ ಬೇಡ ತುಂಬ ಗೌರವ ಆದರಗಳೊಂದಿಗೆ ಸ್ವಾಗತಿಸಿದ ಕಾಲಿಗೆ ನೀರೆರೆದ ಆಸನವಿತ್ತು ಆದರಿಸಿದ ಅಂತಹ ಅನಹ್ಯ ಪರಿಸರದಲ್ಲೂ ಆ ಬೇಡನ ಪ್ರೀತಿಯ ನತ್ಕಾರ ಅವನನ್ನು ಸೆಳೆಯಿತು ಕುಳಿತಲ್ಲೇ ಮನೆಯ ವ್ಯವಹಾರ ಗಮನಿಸಿದ ಮನೆಯ ಒಂದೆಡೆಯಲ್ಲಿ ಮಾಂಸದ ಅಂಗಡಿ ಜನರೆಲ್ಲ ಮಾಂಸವನ್ನು ಖರೀದಿಸಲು ನೇರಿದ್ದರು ಬಂದ ಎಲ್ಲ ಗ್ರಾಹಕರೊಂದಿಗೂ ಬೇಡ ನೌಜನ್ಯದಿಂದ ವರ್ತಿಸುತ್ತಿದ್ದ ಮನೆಯ ಒಳ ಭಾಗದಲ್ಲಿ ಮಂಚದ ಮೇಲೆ ವೃದ್ದರಾದ ದಂಪತಿಗಳಿದ್ದರುಅವರು ಬೇಡನ ತಂದೆ-ತಾಯಿ ಇರಬಹುದೆಂದುಕೊಂಡ ಕೌಶಿಕ ಅವರು ಕರೆದಾಗಲೆಲ್ಲ ಬೇಡ ಮತ್ತು