ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದೇಶದ ಕಧೆಗಳು 39 ಅವನ ಮಡದಿ ಬಂದು ಉಪಚರಿಸುತ್ತಿದ್ದರು ಸ್ವಲ್ಪ ಹೊತ್ತು ಕಳೆಯಿತು ಮಾಂನ ಖರೀದಿಸಲು ಬಂದಿದ್ದ ಗ್ರಾಹಕರನ್ನೆಲ್ಲ ಕಳುಹಿಸಿ, ಬೇಡ ತನ್ನೆಲ್ಲ ಕರ್ತವ್ಯ ಪೂರೈಸಿ ಕೌಶಿಕನೆಡೆಗೆ ಬಂದು ಕುಳಿತ ತಾನೇ ಮಾತಿಗಾರಂಭಿಸಿದ ಅಯ್ಯೋ! ವಿಪ್ರೋತ್ತಮ! ನಿನ್ನಂತಹ ಅತಿಧಿ ಈ ಬಡ ಬೇಡನ ಮನೆಗೆ ಬಂದಿರುವುದು ನನಗೆ ಬಹಳ ಸಂತಸ ತಂದಿದೆ ನಿನ್ನನ್ನು ಆ ನಾಲ್ಟಿಯೇ ನನ್ನ ಮನೆಗೆ ಕಳಿಸಿರುವಳಲ್ಲವೇ? ನೀನು ನಿನ್ನ ಮನದಲ್ಲಿ ಜಿಜ್ಞಾನಗಳನ್ನು ಹೊತ್ತು ಬಂದಿರುವಿ ನಿನ್ನೆಲ್ಲ ಪ್ರಶ್ನೆಗಳಿಗೆ ನಂದೇಹಗಳಿಗೆ ಈಗಾಗಲೇ ಉತ್ತರ ದೊರಕಿರಲು ನಾಕು ಕೌಶಿಕನಿಗೆ ಈಗ ಮತ್ತಷ್ಟೂ ಗೊಂದಲವಾಯಿತು ಈ ಬೇಡನೂ ಸಿದ್ಧಪುರುಷ ! ಆ ನಾದ್ರಿಯು ನನ್ನನ್ನು ಇಲ್ಲಿಗೆ ಕಳುಹಿಸಿದ ವಿಷಯ ಈತನಿಗೆ ಹೇಗೆ ತಿಳಿಯಿತು?! ಬೆರಗಾಗಿ ಅವನತ್ತ ನೋಡಿದ ಬೇಡ ಮತ್ತೆ ಹೇಳಿದ ಇದರಲ್ಲಿ ಅಚ್ಚರಿಪಡಲು ರಹಸ್ಯವೇನಿಲ್ಲ ಇಂತಹ ಸಿದ್ಧಿಗಳನ್ನು ಅರಸಿ ಕಾಡಿಗೆ ಹೋಗಬೇಕಿಲ್ಲ ದೇವರನ್ನು ಕಾಡಿನಲ್ಲಿ ಹುಡುಕಬೇಕಿಲ್ಲ ನೋಡು ನಿನ್ನ ದೇವರು ನಿನ್ನೊಳಗೇ ಇದ್ದಾನೆ ತಂದೆ-ತಾಯಿಯ ರೂಪದಲ್ಲಿ ಹೊರಗಡೆ ಇದ್ದಾನೆ ನನ್ನ ತಂದೆ-ತಾಯಿಗಳೇ ನನ್ನ ದೇವಪೂಜೆಯ ಪ್ರತಿಮೆಗಳು ನನ್ನ ವ್ಯಾಪಾರದ ತಕ್ಕಡಿಯಲ್ಲಿ ದೇವರ ಸಾನ್ನಿಧ್ಯವಿದೆ ನನ್ನ ಕುಲಧರ್ಮವಾದ ಮಾಂನದ ವ್ಯಾವಾರವೇ ನನ್ನ ದೇವಪೂಜೆ ಇದಕ್ಕಿಂತ ಹೆಚ್ಚಿನ ಯಾವ ತಪಸ್ಸನ್ನೂ ನಾನು ಮಾಡಿಲ್ಲ ಮಾಡುವುದೂ ಇಲ್ಲ ನನ್ನ ವೃತ್ತಿಧರ್ಮವನ್ನೇ ತಪವೆಂದು ಬಗೆದಿರುವೆ ನೀನು ನಿನ್ನ ಮನೆಯಲ್ಲಿ ಹಾಸಿಗೆ ಹಿಡಿದ ತಂದೆತಾಯಿಯರನ್ನು ತೊರೆದು ದೂರ ಮಾಡಿ ಕಾಡಿಗೆ ಹೋದೆ ನದಿಯ ಪಾತ್ರದ ಮರಳಹಾಸಿನಲ್ಲಿ ತೋಡಿದರೆ ನೀರು ದೊರಕೀತು ಒಣ