ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಧೆಗಳು ಮರುಭೂಮಿಯಲ್ಲಿ ಅದೆಷ್ಟು ನೆಲ ಬಗೆದರೇನು? ತೋಡಿದಷ್ಟೂಮರಳೇ? ದೊಡ್ಡ ದೀಪದ ಕೆಳಗೇ ಕಣ್ಣು ಕಟ್ಟಿಕೊಂಡು ಬೆಳಕಿಗಾಗಿ ತಡಕಾಡುತ್ತಿರುವೆ ಕಾಡಿನಲ್ಲಿ ಬಹುಕಾಲ ಕಷ್ಟಪಟ್ಟು ತಪಸ್ಸಿನ ಸಿದ್ಧಿಗಳಿಸಿದೆ ಕೇವಲ “ಅಹಂ'ನ ಕೆಟ್ಟ ತೃಪ್ತಿಗಾಗಿ ನಿರವರಾಧಿ ಅಮಾಯಕ ಹಕ್ಕಿಯ ಕೊಂದೆ ಕೊಲೆಯ ವಾತಕ ನಿನ್ನ ಬೆನ್ನಟ್ಟಿತು ತವನ್ನೆಲ್ಲ ಸೋರಿಹೋಯಿತು ನಿನ್ನ ಜಟೆ-ಗಡ್ಡ ಮೀಸೆಗಳ ಜೊತೆಗೆ ಕಾಮ-ಕ್ರೋಧಗಳ ಬೆಳೆಸಿಕೊಂಡೆ ಬ್ರಹ್ಮತೇಜನ್ನು ಕಳೆದುಕೊಂಡೆ ಧರ್ಮ ತುಂಬ ಸೂಕ್ಷ್ಮ ಮತ್ತು ಸಂಕೀರ್ಣವಾದುದು ನೀನು ಮಾಡಿದ ಹಕ್ಕಿಯ ಹತ್ಯೆ ಅದೊಂದು ಕೊಲೆ- ಅಧರ್ಮ ಆದರೆ, ನಾನು ಪ್ರತಿನಿತ್ಯ ಮಾಡುವ ಪ್ರಾಣಿಗಳ ಹತ್ಯೆ ಧರ್ಮ ಪ್ರಾಣಿಗಳ ಹತ್ಯೆಯಲ್ಲಿ ನನಗೆ ಕೇವಲ ಸ್ವಾರ್ಧವಿಲ್ಲ ಇದು ನನ್ನ ಕುಲಧರ್ಮ! ನೀನು ಮಾತ್ರ ಕೇವಲ ಹಿಂಸೆಯ ನೀಚ ನಂತನಕ್ಕಾಗಿ ಹಕ್ಕಿಯನ್ನೂ ಸುಟ್ಟು ಹಾಕಿದೆ ಮತ್ತೆ ನಿನ್ನ ಸಾಮರ್ಧ್ಯಕ್ಕೆ ಬೀಗಿದೆ ಅದು ನೀ ಮಾಡಿದ ಕುಕರ್ಮ!! ಆದುದರಿಂದ, ಬಿಡು ಬಿಟ್ಟುಬಿಡು ಈ ಎಲ್ಲ ನಾಹನಗಳನ್ನು ಮನೆಗೆ ಹಿಂದಿರುಗು , ಸಂಸಾರಿಯಾಗು ತಂದೆ-ತಾಯಿಗಳ ಸೇವೆ ಮಾಡು ಅವರಲ್ಲಿ ದೇವರ ಕಾಣು ನಿನ್ನ ಪಾಲಿನ ಕರ್ತವ್ಯ ಮಾಡು ಅದೇ ದೇವನೊಲುಮೆಯ ದಾನಿ ಅದೇ ನಿನ್ನ ತಪಸ್ಸು ಆಗ ನೀ ಬಯಸದಿದ್ದರೂ, ಸಿದ್ಧಿಗಳು ನಿನ್ನನರಸಿಕೊಂಡು ಬರುತ್ತವೆ ಹೋಗು ದೇವರು ನಿನಗೆ ಒಳ್ಳೆಯದನ್ನು ಮಾಡಲಿ ಇದೇ ಬ್ರಾಹ್ಮಣನಾದ ನಿನಗೆ ನನ್ನ ಪ್ರಣಾಮಗಳು' ಕೌಶಿಕನ ಕಣ್ಣು ತೆರೆಯಿತು ತನ್ನ ಮನೆಯ ಹಾದಿ ಹಿಡಿದ ಕೌಶಿಕ - ಮಹಾಭಾರತ “ಸ್ವವಿಹಿತವೃತ್ಯಾಭಕ್ಕಾ ಭಗವದಾರಾಧನಮೇವ ಹಿ ಪರಮೋ ಧರ್ಮಃ' ಶ್ರೀಮದಾನಂದತೀರ್ಥಭಗವತ್ಪಾದರು