ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಧೆಗಳು ನಾಯಿ ನೀಡಿದ ದಂಡ ರಾಮರಾಜ್ಯದ ಒಂದು ಘಟನೆ ಚಕ್ರವರ್ತಿ ಶ್ರೀರಾಮಚಂದ್ರ ನ್ಯಾಯಸ್ಥಾನದಲ್ಲಿ ಕುಳಿತಿದ್ದಾನೆ ನಾಯಿಯೊಂದು ಕಣ್ಣೀರಿಡುತ್ತಾ ಬಂದಿತು ಸನ್ಯಾಸಿಯೊಬ್ಬ ವಿನಾಕಾರಣ ತನ್ನನ್ನು ಹೊಡೆದನೆಂದು, ಅದಕ್ಕಾಗಿ ಆ ಸಂನ್ಯಾಸಿಗೆ ದಂಡನೆ ನೀಡಿ ತನಗೆ ನ್ಯಾಯ ಒದಗಿಸಬೇಕೆಂದು ಆ ನಾಯಿ ನಿವೇದಿಸಿತು. ನಾಯಿಗೆ ಅನ್ಯಾಯವೆಸಗಿದ ಆ ಸನ್ಯಾಸಿಯನ್ನು ಸಭೆಗೆ ಕರೆತರಲಾಯಿತು ಸಂನ್ಯಾಸಿ ತನ್ನ ತಪ್ಪನ್ನು ಒಪ್ಪಿಕೊಂಡು, ಶಿಕ್ಷೆ ಪಡೆಯಲು ಒಪ್ಪಿದ ಅವನಿಗೆ ತಕ್ಕ ದಂಡನೆಯನ್ನು ವಿಧಿಸಲು ಶ್ರೀರಾಮಚಂದ್ರ ನಾಯಿಗೇ ಹೇಳಿದ ಈ ಸಂನ್ಯಾಸಿಗೆ ಏನು ಶಿಕ್ಷೆ ವಿಧಿಸಬೇಕು? ನೀನೇ ಹೇಳು' ನಾಯಿ ಯೋಚಿಸಿ ಉತ್ತರಿಸಿತು “ರಾಜನ್, ಇವನಿಗೆ ಕುಲಾಧಿಪತಿಯ ವದವಿ ನೀಡು ಅದೇ ಅವನಿಗೆ ಶಿಕ್ಷೆ!” ಎಲ್ಲರಿಗೂ ಆಶ್ಚರ್ಯವೇ ಆಶ್ಚರ್ಯ! ಕುಲಾಧಿಪತಿಯ ಸ್ಥಾನ ಶಿಕ್ಷೆಯೆ? ನಾಯಿಯೇ ಮತ್ತೆ ವಿವರಿಸಿತು “ಹಿಂದೆ ನಾನೂ ಕುಲಾಧಿಪತಿಯ ಸ್ಥಾನದಲ್ಲೇ ಇದ್ದೆ ಆ ಪದವಿಯಲ್ಲಿದ್ದು ಅವ್ಯವಹಾರ ನಡೆಸಿದೆ ಅದರಿಂದಾಗಿಯೇ ನನಗೆ ಈ ನಾಯಿಯ ಪಾಡು ಈ ಸನ್ಯಾಸಿಯೇ ಈಗ ಕುಲಪತಿ ಸ್ಥಾನವನ್ನೇರಿದರೆ, ಅವನೂ ನನ್ನಂತೆ ನಾಯಿಯ ಜನ್ಮ ಪಡೆಯುವನಲ್ಲವೇ?” ಇದು ನಾಯಿಯ ಊಹೆ! ಈ ನಾಯಿಯ ಕತೆ, ಪೀರಾಧಿಪತಿಗಳು, ದೇವಾಲಯದ ಅಧಿ ಕಾರಿಗಳು, ಸಾರ್ವಜನಿಕ ಸಂಸ್ಥೆಗಳ ಪದಾಧಿಕಾರಿಗಳು, ಮಂತ್ರಿಗಳು, ಎಷ್ಟು ಜಾಗರೂಕವಾಗಿ ವರ್ತಿಸಬೇಕೆಂಬುದನ್ನು ತೋರಿಸುತ್ತದೆ