ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು ದಟ್ಟಡವಿಯ ದಾರಿ ದಟ್ಟ ಕಾಡು ಸೂರ್ಯನ ಕಿರಣಗಳೂ ಸುಳಿಯದಂತೆ ತಡೆಯುವ ನಿಬಿಡವಾಗಿ ಹೆಣೆದುಕೊಂಡ ಮರಗಳು ಒಂದು ಹೆಜ್ಜೆಯನ್ನೂ ಮುಂದಿಡಲಾಗದಂತೆ ಗಿಡ-ಬಳ್ಳಿಗಳಿಂದ ತುಂಬಿದ ನೆಲ ಬರೀ ಪ್ರಾಣಿಗಳ ಕೂಗಿನ ನದ್ದು ಅಂತಹ ಭಯಾನಕ ಕಾಡಿನಲ್ಲಿ ಅವನು ಸಿಕ್ಕಿ ಹಾಕಿಕೊಂಡಿದ್ದ ದಿಕ್ಕು ತೋಚದೇ ಅಲೆದಾಡುತ್ತಿರುವನು ಕಾಡಿನಿಂದ ಹೊರಹೋಗುವ ದಾರಿ ಅವನಿಗೆ ಗೊತ್ತಿಲ್ಲ ಎಷ್ಟು ಸುತ್ತಿದರೂ ಕಾಡಿನಿಂದ ಹೊರ ಹೋಗಲು ಒಂದು ಕುರುಹೂ ದೊರೆಯುತ್ತಿಲ್ಲ ಅವನು ಎತ್ತಲೋ ನೋಡುತ್ತ ನಿಂತಿದ್ದ ಹಿಂದಿನಿಂದ ಬಂದ ಹುಲಿಯ ಗರ್ಜನೆ ಕೇಳಿದಾಗಲೇ ಅವನಿಗೆ ಎಚ್ಚರ ! ಹಿಂದಿರುಗಿ ನೋಡಿದ ಹುಲಿಯೊಂದು ಇವನನ್ನು ಭಕ್ಷಿಸಲು ಬೆನ್ನಟ್ಟಿ ಬರುತ್ತಿದೆ ಗಾಬರಿಯಾದ ಓಡಿದ ಓಡಿದ ಹುಲಿ ಬೆನ್ನು ಬಿಡುತ್ತಿಲ್ಲ ಅಷ್ಟರಲ್ಲಿ ಓಡುವ ಭರದಲ್ಲಿ ನೋಡದೇ ಎಡವಿ, ಗಿಡ-ಬಳ್ಳಿ ತುಂಬಿದ ಹಾಳು ಬಾವಿಯೊಂದರಲ್ಲಿ ಬಿದ್ದ ಅವನ ಅದೃಷ್ಟ ತಲೆಕೆಳಗಾಗಿ ಬೀಳುತ್ತಿದ್ದ ಅವನ ಕಾಲು ಬಳ್ಳಿಯೊಂದಕ್ಕೆ ಸಿಕ್ಕಿಕೊಂಡಿತು ಅವನು ಕೆಳಗಿನ ಪ್ರವಾತಕ್ಕೆ ಬೀಳಲಿಲ್ಲ ತಲೆ ಕೆಳಗೆ , ಕಾಲು ಮೇಲೆ 1 ಹಾಳುಬಾವಿಯಲ್ಲಿ ಅವನ ತೂಗಾಟ ಮೇಲಕ್ಕೆ ತಲೆಯೆತ್ತಿ ನೋಡಿದ ಏನೊಂದೂ ಕಾಣದ ಕತ್ತಲೆ ಅರೆಬೆಳಕಿನ ಮಸುಕಿನಲ್ಲಿ ಹೊಂಚು ಹಾಕುತ್ತಿರುವ ಹುಲಿ ಕಂಡಿತು ಬಾವಿಗೆ ಬಿದ್ದರೂ ಸದ್ಯ ಈ ಹುಲಿಯಿಂದ ತಪ್ಪಿಸಿಕೊಂಡೆನಲ್ಲಾ ಎಂಬ ಹುಸಿ ಸಂತಸ ಅವನಿಗೆ ಕೆಳಕ್ಕೆ ನೋಡಿದ ಭಾರೀ ಪ್ರಪಾತ ಯಾವಾಗ ಕಾಲು ತಪ್ಪಿ ಬೀಳುವನೋ ಗೊತ್ತಿಲ್ಲ ಕೆಳಗೆ ಭಾರೀ ಗಾತ್ರದ ಹೆಡೆತೆರೆದ ಘಟನರ್ಪ, ಕಾಲಸರ್ಪ ಕಾಯುತ್ತಿದೆ ಮತ್ತೆ ಎದೆಯಲ್ಲಿ ನಡುಕ ಇಷ್ಟರ ಮಧ್ಯೆ, ಅಲ್ಲಿಯೇ ಕಸಿ ಕೊಂದ ಜೇನುಗೂಡಿಗೆ ಕಾಲು