ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಧೆಗಳು ಇಂದ್ರಿಯಗಳ ಮಹತ್ “ ಅಲರ್ಕ'ನಿಗೆ ಇಂದ್ರಿಯಗಳ ಮೇಲೆ ಹತೋಟಿ ಸಾಧಿಸಬೇಕೆಂಬ ಆನೆ ದುರ್ವಿಷಯಗಳತ್ತ ಹರಿಯುವ ಇಂದ್ರಿಯಗಳ ಮೇಲೆ ಅವನಿಗೆ ಅಸಹನೆ, ಸಿಟ್ಟು ಒಂದು ದಿನ, ತನ್ನೆಲ್ಲ ಕಿವಿ, ಕಣ್ಣು ನಾಲಿಗೆ, ಮೂಗು, ಇಂದ್ರಿಯಗಳನ್ನು ಕತ್ತಿಯಿಂದ ಕಿತ್ತೆಸೆಯಲು ಹೊರಟನು ಆಗ ಅವನೆದುರು ಇಂದ್ರಿಯಾಭಿಮಾನಿ ದೇವತೆಗಳು ಬಂದಿಳಿದರು “ ಅಲರ್ಕ! ನೀನು ಮಾಡುತ್ತಿರುವುದು ಸರಿಯೆ? ಇನ್ನೊಮ್ಮೆ ವಿಚಾರ ಮಾಡು ಕೆಟ್ಟ ವಿಷಯಗಳೆಡೆಗೆ ಹರಿಯುವ ಇಂದ್ರಿಯಗಳನ್ನೆಲ್ಲ ಕಿತ್ತು ಎಸೆದರೆ, ನೀನೆಣಿಸಿದಂತೆ ಕೆಟ್ಟ ಕಾರ್ಯಗಳು, ನಡೆಯದಿರಬಹುದು, ವಾವನಾಧನ ಆಗದಿರಬಹುದು ಆದರೆ, ಅವರಿಂದ ಮಾತ್ರ ಸತ್ಸಾಧನೆಯಾಯಿತೆಂದು ತಿಳಿಯಬೇಡ ಕೇವಲ ಕೆಟ್ಟ ಕಾರ್ಯಗಳು ನಿಂತರೆ ಮಾತ್ರ ಸಾಲದು, ಸತ್ಕಾರ್ಯಗಳು ನಡೆಯಬೇಕು ಅದಕ್ಕಾಗಿ ಇಂದ್ರಿಯಗಳು, ಈ ದೇಹ ಎಲ್ಲ ಬೇಕೇ ಬೇಕು ಇಂದ್ರಿಯಗಳು ಈ ದೇಹ ನಾಧನೆಯ ಮಾರ್ಗದ ಸಾಧನಗಳು ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಲು ಪ್ರಯತ್ನಿಸಬೇಕೇ ಹೊರತು, ಅವುಗಳನ್ನು ಕಿತ್ತೊಗೆಯುವುದರಿಂದ ಯಾವ ಪ್ರಯೋಜನವೂ ಆಗದು ನಶಕ್ತ ಇಂದ್ರಿಯಗಳನ್ನು ಸರಿಯಾದ ದಾರಿಯಲ್ಲಿ ನಡೆಸಿ ಸಾಧನೆ ಮಾಡಿಕೊಳ್ಳುವುದೇ ಇಂದ್ರಿಯ ನಿಗ್ರಹ, ಇಂದ್ರಿಯಗಳನ್ನು ಕಿತ್ತೆಸೆಯುವುದಿಲ್ಲ!!” ಇದು ಇಂದ್ರಿಯಾಭಿಮಾನಿ ದೇವತೆಗಳು ಅಲರ್ಕನಿಗೆ ನೀಡಿದ ಸಂದೇಶ ಸಾಧಕರಿಗೆಲ್ಲ ಕೊಟ್ಟಎಚ್ಚರ !