ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

48 ಸಂದೇಶದ ಕಥೆಗಳು ಅದರ ಸಂಮಾನಗಳೆಲ್ಲ ಆ ಪದಕ್ಕೆ ಸ್ಥಾನಕ್ಕೆ ಸಲ್ಲಬೇಕಾದುದೇ ಹೊರತು ಸ್ವಂತ ಅವರಿಗಲ್ಲ!! ಸಮಾಜದಲ್ಲಿ ಮನೆಯಲ್ಲಿ ಬೇರೆಯವರಿಂದ ನಾವು ಪಡೆಯುವ ಗೌರವ- ಆದರ- ಪ್ರಣಾಮಗಳನ್ನು ನಾವು ನಮ್ಮೊಳಗೆ ನೆಲೆಸಿರುವ ಭಗವಂತನಿಗೆ ಎಂದು ತಿಳಿದು ಅವನಿಗೇ ಅರ್ಪಿಸಬೇಕೇ ಹೊರತು, ಆ ನಮಸ್ಕಾರ-ಗೌರವಾದರಗಳು ನಮಗೇ ಎಂದು ಭಾವಿಸಬಾರದು. 'ಗುಹಾಶಯಾಯೇವ ನ ದೇಹಮಾನಿನೇ...??

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಚತಿ ಸಾಗರಮ್ | ಸರ್ವದೇವನಮಸ್ಕಾರ: ಕೇಶವಂ ಪ್ರತಿ ಗಚ್ಛತಿ || ಆಗಸದಿಂದ ಬೀಳುವ ನೀರಹನಿ ಸಾಗರವ ಸೇರುವಂತೆ, ಬೇರೆಲ್ಲ ದೇವತೆಗಳಿಗೆ ಮಾಡುವ ನಮನ ಕೇಶವನಿಗೆ ಸಲ್ಲುತ್ತದೆ.