ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಧೆಗಳು ಮುಂದೆ ಸಾಗದ ದೋಣಿ ನದಿಯ ಪಾತ್ರ ತುಂಬಾ ವಿಶಾಲ ಒಂದು ದಡದಿಂದ ಮತ್ತೊಂದು ದಡ ತಲುಪಬೇಕಾಗಿದೆ ರಾತ್ರಿಯ ಹೊತ್ತು ತುಂಬ ಕತ್ತಲೆ ದೋಣಿಯೊಂದರಲ್ಲಿ ಅವನು ಕುಳಿತ ಅವನಿಗೆ ಹುಟ್ಟು ಹಾಕಿ ಅಭ್ಯಾಸವಿದೆ ಹುಟ್ಟು ಹಾಕತೊಡಗಿದ ತುಂಬ ಹೊತ್ತು ಕಳೆಯಿತು ಆಚೆಯ ದಡ ಬರುತ್ತಲೇ ಇಲ್ಲ ! ಹುಟ್ಟು ಹಾಕುತ್ತಲೇ ಇದ್ದ ರಾತ್ರಿಯಿಡೀ ಕಳೆಯಿತು ಬೆಳಕಾಯಿತು ಅವನ ದೋಣಿ ಅದೇ ದಡದಲ್ಲೇ ಇದೆ 1 ರಾತ್ರಿಯಿಡೀ ಹುಟ್ಟು ಹಾಕಿದರೂ ದೋಣಿ ಸ್ವಲ್ಪವೂ ಮುಂದೆ ಸರಿದಿಲ್ಲ! ಅವನಿಗೆ ದಿಗ್ಧಮೆಯಾಯಿತು ! ಏಕೆ ? ಯೋಚಿಸಿದ ಅದನ್ನೇ ಚಿಂತಿಸುತ್ತ ಹಿಂದಿರುಗಿ ನೋಡಿದರೆ, ಎಲ್ಲ ಅರ್ಧವಾಯಿತು ರಾತ್ರಿಯಿಡೀ ಮಾಡಿದ ಕಾಯಕ ವ್ಯರ್ಥವಾದುದು ಏಕೆಂದು ಅವನಿಗರ್ಧವಾಯಿತು ದಡದ ಗೂಟಕ್ಕೆ ಕಟ್ಟಿದ್ದ ದೋಣಿಯ ಗಂಟನ್ನು ಬಿಚ್ಚದೇ ಅವನು ರಾತ್ರಿಯ ಕತ್ತಲಲ್ಲಿ ಹುಟ್ಟು ಹಾಕಿದ್ದ ನಮ್ಮದೂ ಇದೇ ಕತೆ ! ಸಂಸಾರದ ಜೊತೆಗೆ ನಮಗಿರುವ ಅಭಿಮಾನ ಮಮಕಾರಗಳ ಗಂಟನ್ನು ಬಿಚ್ಚದೇ ನಾವು ನಡೆಸುವ ಧಾರ್ಮಿಕ ಆಧ್ಯಾತ್ಮಿಕ ಕಾಯಕ , ಸಾಧನೆಯಲ್ಲಿ ಕಟ್ಟಿದ ದೋಣಿಗೆ ಹುಟ್ಟು ಹಾಕಿದ ಶ್ರಮ ! ಸಂಸಾರಕ್ಕೆ ಕಟ್ಟಿಕೊಂಡ ನಾವು ಅದೆಷ್ಟು ಸಾಧನೆ ಮಾಡಿದರೂ, ನಮ್ಮದು ಮುಂದೆ ಚಲಿಸದ ದೋಣಿಯಲ್ಲಿನ ವಯಣವಾಗಿದೆ !!