ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

58 ಸಂದೇಶದ ಕದೆಗಳು ದೇವರಿಗೆ ತಲುಪಿದ್ದು ಎರಡು ಮಾತ್ರ! ಜಮೀನುದಾರರ ತೋಟದಲ್ಲಿ ಬಾಳೆಯ ಫಸಲು ಬಂದಿತು ಪ್ರತಿವರ್ಷ ಫಸಲು ಬಂದಾಗ ಮೊದಲು ಊರ ದೇವರಿಗೆ ನೈವೇದ್ಯ ಮಾಡಿಸುವುದು ಜಮೀನುದಾರರ ವಾಡಿಕೆ ಈ ಬಾರಿಯೂ ದೇವಸ್ಥಾನಕ್ಕೆ ದೇವರ ನಮರ್ಪಣೆಗಾಗಿ ಒಂದು ಬಾಳೆಯ ಗೊನೆ ತೆಗೆದಿರಿಸಿದರು ತೋಟದಲ್ಲಿ ಕೆಲಸ ಮಾಡುವ ವುಟ್ಟ ಬಾಲಕನ ಕೈಯಲ್ಲಿ ಆ ಗೊನೆ ನೀಡಿ, ದೇವಸ್ಥಾನದ ಅರ್ಚಕರಿಗೆ ಕೊಡಲು ಹೇಳಿ ಕಳಿಸಿದರು ಆ ಹುಡುಗ ಬಾಳೆಯ ಗೊನೆ ಹೊತ್ತು ದೇವಸ್ಥಾನದತ್ತ ಹೊರಟ ಮಧ್ಯಾಹ್ನದ ಹೊತ್ತು ಭಾರೀ ಬಿಸಿಲು, ಹುಡುಗನಿಗೆ ಹಸಿವು ದೇವರಿಗಾಗಿ ಹೊರಟ ಆ ಗೊನೆಯ ಬಾಳೆಹಣ್ಣುಗಳು ಚೆನ್ನಾಗಿ ಹಣ್ಣಾಗಿದ್ದವು ಸುವಾಸನೆ ಹುಡುಗನ ಮೂಗಿಗೆ ಬಡಿಯುತ್ತಿತ್ತು ಮೊದಲೇ ಹಸಿವಿನಿಂದ ಕಂಗಾಲಾದ ಹುಡುಗನಿಗೆ ಸ್ವಲ್ಪವೂ ತಡೆಯಲಾಗಲಿಲ್ಲ ಗೊನೆ ಕೆಳಗಿಳಿಸಿದ ನಡುವಿನ ಎರಡು ಹಣ್ಣು ಕಿತ್ಯ ಹಿಂದೆಮುಂದೆ ನೋಡದೇ ತಿಂದೇ ಬಿಟ್ಟ ಅವನ ಹಸಿವು ಹಿಂಗಿತು ಮತ್ತೆ ಗೊನೆ ಹೊತ್ತು ದೇವಸ್ಥಾನದ ಬಳಿಗೆ ಬಂದು ಅರ್ಚಕರಿಗೆ ನೀಡಿದ ಅರ್ಚಕರು ದೇವರ ಸಮರ್ಪಣೆಗೆ ಜಮೀನ್ದಾರರು ಕಳಿಸಿದ ಬಾಳೆಯ ಗೊನೆ ನೋಡಿದರು ನಡುವಿನ ಎರಡು ಹಣ್ಣು ಕಿತ್ತಿರುವುದು ಅವರ ಕಣ್ಣಿಗೆ ಬಿತ್ತು ಹುಡುಗನನ್ನು ಗದರಿ ಕೇಳಿದರು ಆ ಹುಡುಗ ತಾನೇ ಕಿತ್ತು ತಿಂದಿರುವುದಾಗಿ ಒಪ್ಪಿಕೊಂಡ ಅರ್ಚಕರು ಅವನನ್ನು ಚೆನ್ನಾಗಿ ಬೈದರು ದೇವರ ನಮರ್ಪಣೆಗೆ ತಂದುದನ್ನು ಕದ್ದು ತಿಂದದ್ದು ಮಹಾವರಾಧ ಅಷ್ಟೂ ತಿಳಿಯಲಾರದೇ? ಎಂದೆಲ್ಲ ಆ ಬಾಲಕನಿಗೆ ಬೆವರಿಳಿಸಿ ಕಳುಹಿಸಿದರು ಆ ದಿನದ ಪೂಜೆಯಲ್ಲಿ ಉಳಿದ ಬಾಳೆಯ ಗೊನೆಯನ್ನು ದೇವರಿಗೆ ನೈವೇದ್ಯ ಅರ್ಪಿಸಿದರು