ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

S2 ಸಂದೇಶದ ಕಥೆಗಳು ..... ..... 'ನಾ' ಹೋದರೆ, ಹೋದೇನು... “ನಿಮ್ಮಲ್ಲಿ ಮುಕ್ತಿಗೆ ಯಾರು ಹೋಗಬಲ್ಲಿರಿ?' ಗುರುಗಳು ಶಿಷ್ಯರನ್ನು ಕೇಳಿದರು. ಉತ್ತರ ಬರಲಿಲ್ಲ ಶಿಷ್ಯವರ್ಗದಲ್ಲಿ ಗುಸುಗುಸು. ತಾ ಹೋಗಬಲ್ಲೆನೆಂದು ಹೇಳಲು ಯಾರಿಗೂ ಧೈರ್ಯವಿಲ್ಲ. ಗುರುಗಳು ಸುಮ್ಮನಿದ್ದರು. ಯಾರಿಂದಲೂ ಉತ್ತರ ಬರಲಿಲ್ಲ. ಕೊನೆಗೆ ಗುರುಗಳು ದೂರದ ಮೂಲೆಯಲ್ಲಿ ಕುಳಿತ ಕನಕನನ್ನು ಕೇಳಿದರು. ಕನಕ ಉತ್ತರಿಸಿದ. "ಗುರುಗಳೇ, ನಾ ಹೋದರೆ, ಹೋದೇನು...? ಶಿಷ್ಯರೆಲ್ಲ ನಗತೊಡಗಿದರು. ಹಾಸ್ಯ ಮಾಡಿದರು. ವ್ಯಂಗ್ಯವಾಡಿದರು. ಸರಿಯಾದ ಉತ್ತರ !” ಗುರುಗಳು ಹೀಗೆಂದಾಗ ಎಲ್ಲರಿಗೂ ಅಚ್ಚರಿಯೋ ಅಚ್ಚರಿ ! ಕನಕನ ಸೂತ್ರಪ್ರಾಯದ ಮಾತು ಗುರುಗಳಿಗೆ ಅರ್ಥವಾಗಿತ್ತು “ನಾನು', 'ನನ್ನದು' ಎಂಬ ಅಹಂಕಾರ- ಮಮಕಾರವಳಿದರೆ, ಮುಕ್ತಿಕಟ್ಟಿಟ್ಟ ಬುತ್ತಿ!! ಇದು ಕನಕ ಹೇಳಿದ ಮಾತು ಶಿಷ್ಯ ಕನಕನ ಸೂತ್ರಕ್ಕೆ ಗುರುಗಳ ಭಾಷ್ಯ !