ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

54 ನಂದೇಶದ ಕಧೆಗಳು - el . ಹೊತ್ತು ಮುಳುಗಿದ ಮೇಲೆ... ಹಸಿವಿನಿಂದ ಬಳಲುತ್ತಿದ್ದ ಆ ಹಕ್ಕಿಗೆ ಬೆಳಗಿನಿಂದ ಆಹಾರ ದೊರಕಿರಲಿಲ್ಲ ಸುತ್ತಾಡಿ ಸುಸ್ತಾದ ಹಕ್ಕಿ ಸಮುದ್ರದ ದಂಡೆಗೆ ಬಂದಿತು ಸಮುದ್ರದ ತರೆಗಳಾಚೆ ಹೆಣವೊಂದು ತೇಲುತ್ತಿರುವುದು ಹಕ್ಕಿಗೆ ಕಾಣಿಸಿತು ಹಕ್ಕಿಯ ನಂತನಕ್ಕೆ ಪಾರವೇ ಇಲ್ಲ ಮರುಕ್ಷಣದಲ್ಲಿ ಹಕ್ಕಿ ಆ ಹೆಣದ ಮೇಲೆ! ಹೆಣವನ್ನು ಕುಕ್ಕಿ ಮಾಂಸ ತಿನ್ನತೊಡಗಿತು ಹಸಿದ ಹಕ್ಕಿಗೆ ಉಸಿರು ಬಂತು ಸ್ವಲ್ಪ ಹೊತ್ತಾಯಿತು ಹಕ್ಕಿಗೆ ಮಾಂಸದ ರುಚಿ ಹಿಡಿಯಿತು ಎಷ್ಟು ತಿಂದರೂ ತೃಪ್ತಿಯಿಲ್ಲ. ಹೊಟ್ಟೆ ತುಂಬಿ ತೇಗಿದರೂ, ಮತ್ತಷ್ಟೂ ತಿನ್ನವಾಸೆ ಹಕ್ಕಿ ಆ ಮಾಂಸದ ರುಚಿಗೆ ಮೈಮರೆಯಿತು ತಿನ್ನುವುದರಲ್ಲಿ ಮಗ್ನವಾದ ಹಕ್ಕಿಗೆ ನಮಯ ಕಳೆದು ನಂಜೆಯಾದದ್ದೇ ತಿಳಿಯಲಿಲ್ಲ ಕೊನೆಗೊಮ್ಮೆ ಅದಕ್ಕೆ ಬಾಯಿ ಕಟ್ಟಿತು ಗೂಡಿಗೆ ಹಿಂದಿರುಗುವ ತವಕ ಕತ್ತೆತ್ತಿಸುತ್ತಲೂ ನೋಡಿತು ಎಲ್ಲಿಯೂ ನಮುದ್ರದ ದಡವೇ ಕಾಣುತ್ತಿಲ್ಲ ಎಲ್ಲಿ ನೋಡಿದರಲ್ಲಿ ನಾಗರದ ತೆರೆಗಳು ಹಕ್ಕಿಗೆ ದಿಕ್ಕೇ ತೋಚಲಿಲ್ಲ ಹಕ್ಕಿ ಕುಳಿತ ಆ ಹೆಣ ತೇಲುತ್ತ ತೇಲುತ್ತ ನಾಗರದ ಮಧ್ಯಕ್ಕೆ ಬಂದಿತ್ತು ಹಕ್ಕಿ ಹೌಹಾರಿತ್ತು ಅಲ್ಲಿಯೇ ಇರುವಂತಿಲ್ಲ ದಡದೆಡೆಗೆ ಹಾರುವಂತಿಲ್ಲ! ತ್ರಿಶಂಕುಸ್ಥಿತಿ ಹಕ್ಕಿಯದಾಗಿತ್ತು ಭೋಗಜೀವನದಲ್ಲೇ ಮುಳುಗಿರುವ ನಮ್ಮ ವಾಡೂ ಇದೇ! ಇಂದ್ರಿಯಗಳೆಲ್ಲ ಚುರುಕಾಗಿರುವಷ್ಟು ಕಾಲ, ಭೋಗ-ವೈಭೋಗಗಳಲ್ಲಿ ಮೈಮರೆತು, ಇಂದ್ರಿಯಗಳು ಶಕ್ತಿ ಕಳೆದುಕೊಂಡು ಸಾಕೆನಿಸಿದಾಗ ವಾರಕದ ಬಗ್ಗೆ ಎಚ್ಚರಗೊಳ್ಳುವೆವು ಆದರೆ, ಮತ್ತೆ ಹಿಂದಿರುಗಲಾರದಷ್ಟು ದೂರ ನಾಗಿ, ನಾವು ವಂಚಿತರಾಗುವೆವು ಆದುದರಿಂದ ಆ ಹಕ್ಕಿಯಂತೆ ಸಂನಾರದ ರುಚಿಯಲ್ಲಿ ಮೈಮರೆಯದೇ, ನಾವು ಎಚ್ಚೆತ್ತುಕೊಳ್ಳಬೇಕು ನಾವು ಎಲ್ಲಿದ್ದರೂ ನೇರಬೇಕಾದ ಗಮ್ಯದತ್ತ ಸದಾ ಲಕ್ಷ್ಯವಿರಬೇಕು