ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದೇಶದ ಕಧೆಗಳು ಲಿ ಹಿಂದಿರುಗಿದಾಗ... ತಂದೆಗೆ ಮಗನ ಮೇಲೆ ತುಂಬ ನಂಬಿಕೆ ತನ್ನ ಮಾತನೆಲ್ಲ ನಡೆಸುವನೆಂಬ ವಿಶ್ವಾಸ ಒಮ್ಮೆ ದೂರದ ನಗರದಲ್ಲಿ ಕೋರ್ಟಿನ ಕೆಲಸದ ಅನಿವಾರ್ಯತೆಯೊಂದು ಬಂದೊದಗಿತು ಆ ಕೆಲಸ ಪೂರೈಸಿ ಬರಲು ಮಗನಿಗೆ ಅಪ್ಪ ಹೇಳಿದ ಕೋರ್ಟು -ಕಚೇರಿಯ ಕೆಲಸ, ಅಪ್ಪ ಮಗನಿಗೆ ನಾಕಷ್ಟು ಹಣ ನೀಡಿದ ನರಿ! ಅಪ್ಪ ಹೇಳಿದ ಕೆಲಸಕ್ಕಾಗಿ ಮಗ ನಗರಕ್ಕೆ ಬಂದಿಳಿದ ನಗರದ ಬಣ್ಣ- ಬಣ್ಣದ ಬೀದಿಗಳು, ಅಲ್ಲಿನ ಚಿತ್ರಮಂದಿರಗಳು, ವಿಧವಿಧದ ಉಪಹಾರ ಮಂದಿರಗಳು, ಮಾರಾಟ ಮಳಿಗೆಗಳು-ಇದೆಲ್ಲ ಕಂಡು ಆ ಮಗನಿಗೆ ಹುಚ್ಚೇ ಹಿಡಿಯಿತು ಪಟ್ಟಣವನ್ನೆಲ್ಲ ತಿರುಗಾಡಿದ ಆನಂದದಲ್ಲಿ ಮೈಮರೆತ ಬೇಕೆನಿಸಿದ ವಸ್ತುಗಳನ್ನೆಲ್ಲ ಕಂಡು ಕೊಂಡ ಪುಳಕಗೊಂಡ ಅಪ್ಪ ನೀಡಿದ ಹಣವೆಲ್ಲ ಖಾಲಿಯಾಯಿತು ಕೈ ಬರಿದಾಯಿತು ಅವನಿಗೆ ತನ್ನೂರ ನೆನಪಾಯಿತು ಊರಿಗೆ ಹಿಂದಿರುಗಿದ ಬರಿಗೈಯಲ್ಲಿ ಮನೆಗೆ ಬಂದ ಮಗನನ್ನು ಅಪ್ಪ ಕೇಳಿದ 'ಕೆಲಸವಾಯಿತೋ? ಮಗ ತಲೆ ಕೆರೆದುಕೊಂಡ “ನಾನು ಹೇಳಿ ಕಳುಹಿಸಿದ ಕೆಲಸ ಪೂರೈಸಿಕೊಂಡು ಬಂದೆಯಾ?” ಅಪ್ಪ ಜೋರಾಗಿ ಕೇಳಿದ ಈ ಬೆಪ್ಪನಿಗೆ ಈಗ ಅಪ್ಪ ಹೇಳಿದ ಕೆಲಸದ ನೆನಪಾಯಿತು ಅವನ ಕೆಲನಕ್ಕಾಗಿ ನಗರಕ್ಕೆ ಹೋದ ವ್ಯಕ್ತಿ ಆ ಕೆಲನವೊಂದನ್ನು ಬಿಟ್ಟು ಬೇರೆಲ್ಲ ಮಾಡಿ ಬಂದಿದ್ದ! ಅಪ್ಪ ಹೇಳಿದ ಕೆಲಸವನ್ನೇ ಮರೆತಿದ್ದ 11 ಅಪ್ಪಮಗನ ತಿಳಿಗೇಡಿತನಕ್ಕೆ ಹಣೆ ಹಣೆ ಚಚ್ಚಿಕೊಂಡ