ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

56 ಸಂದೇಶದ ಕಥೆಗಳು ಭಗವಂತನೂ ನಮ್ಮನ್ನು ಜ್ಞಾನಸಾಧನೆಗಾಗಿ ಮಾನವಜನ್ಮ ನೀಡಿ ಇಲ್ಲಿಗೆ ಕಳಿಸಿದ್ದಾನೆ. ನಾವು ಭಗವಂತ ಹೇಳಿದ ಆ ಕಾರ್ಯವನ್ನೂ ಬಿಟ್ಟು ಐಷಾರಾಮದ ಜೀವನ ನಡೆಸಿ ಅವನ ಬಳಿಗೆ ಬರಿಗೈಯಲ್ಲಿ ಹಿಂದಿರುಗುತ್ತೇವೆ. ಮಾನವ ಜನ್ನ ಹೊತ್ತು ಇಲ್ಲಿಗೆ ಬಂದಾಗ ಅವನ ಸಂದೇಶವನ್ನು ಮರೆಯುತ್ತೇವೆ. ಭೋಗದಲ್ಲಿ ಮೈಮರೆತು, ಜೀವನ ಸಾರ್ಥಕವೆಂದು ಭಾವಿಸುತ್ತೇವೆ. ಮತ್ತೆ ಸ್ತರಣೆಯಾದಾಗ ಅವಕಾಶ ಕಳೆದುಹೋಗಿರುತ್ತದೆ ; ಕಾಲ ಮಿಂಚಿ ಹೋಗಿರುತ್ತದೆ ! ನಮ್ಮ ಅವಿವೇಕದ ಈ ವರ್ತನೆಗೆ ಆ ಭಗವಂತನೂ ತಲೆ ಚಚ್ಚಿಕೊಂಡಾನು!!