ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು ಪ್ರವೇಶಿಸುತ್ತಿದ್ದಂತೆಯೇ ಅದೇ ವ್ಯಕ್ತಿಯೇ ಚೆನ್ನಾಗಿ ಬಯ್ಯತೊಡಗಿದ. ಯಾತ್ರಿಕರಿಗೆಲ್ಲ ಬೆರಗಾಯಿತು. ಅವನು ಹುಚ್ಚನಿರಬೇಕೆಂದುಕೊಂಡರು. ಅವನ ಬೇರೆ ವರ್ತನೆ ನೋಡಿದಾಗ ಅವನು ಹುಚ್ಚನಲ್ಲ ಎಂದೆನಿಸಿತು. ಕೊನೆಗೆ ಅವರೆಲ್ಲ ಸೇರಿ ವಿಮರ್ಶಿಸಿ, ಆ ಮಣ್ಣ ದಿಬ್ಬವನ್ನು ಅಗೆದರಂತೆ ! ಏನಚ್ಚರಿ ! ಅದರ ಅಡಿಯಲ್ಲಿ ನ್ಯಾಯ- ಧರ್ಮಶೀಲನಾದ ಚಕ್ರವರ್ತಿ ವಿಕ್ರಮಾದಿತ್ಯನ ಸಿಂಹಾಸನವಿತ್ತಂತೆ !! ಅದಕ್ಕೇ, ಆ ವ್ಯಕ್ತಿ ದಿಬ್ಬವನ್ನೇರಿ ನಿಂತಾಗ ಸ್ವಾಗತದ ಸವಿಮಾತುಗಳನ್ನಾಡಿದ. ಕೆಳಗೆ ಬಂದಾಗ ಅದಕ್ಕೆ ವಿಪರೀತವೇ! ನಾವೂ ಅಂತೆಯೇ ವೇದಿಕೆಯ ಮೇಲೆ ನಿಂತಾಗ ನ್ಯಾಯ, ಧರ್ಮ, ನೀತಿ, ಸತ್ಯದ ಬಗೆಗೆ ತುಂಬ ಮಾತನಾಡುತ್ತೇವೆ. ಕೆಳಗಿಳಿದಾಕ್ಷಣ ನಮ್ಮೆಲ್ಲ ಪ್ರವೃತ್ತಿಗಳೂ ಅದಕ್ಕೆ ವಿರುದ್ಧವಾಗಿಯೇ ಇರುತ್ತವೆ. ನ್ಯಾಯ ಧರ್ಮಗಳು ಕೇವಲ ಉಪನ್ಯಾಸಕ್ಕಾಗಿ ಆಚರಣೆಗಾಗಿ ಅಲ್ಲ ಎಂಬ ವರ್ತನೆ ನಮ್ಮದು. “ನಡೆಯಲ್ಲೊಂದು; ನುಡಿಯಲ್ಲೊಂದು ಇದು ನಮ್ಮ ವಿಡಂಬನೆಯ ಕತೆ.