ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು 59 'ಕುರಿ'ಯಾದ ಹುಲಿ ಹುಲಿಯ ಮರಿಯೊಂದು ತಪ್ಪಿ ಆಕಸ್ಮಿಕವಾಗಿ ಕುರಿಗಳ ಮಂದೆಯ ನಡುವೆ ಸೇರಿಕೊಂಡಿತು ಆ ಕುರಿಗಳ ಮಧ್ಯೆ ಬೆಳೆಯುತ್ತಾ ಆ ಹುಲಿಗೆ ತಾನು ಹುಲಿಯೆಂಬುದೇ ತಿಳಿಯಲಿಲ್ಲ ಕುರಿಗಳಂತೆ ಅದೂ (ಮೇ ಮೇ ೨ ಎಂದು ಕಿರುಚುತ್ತಿತ್ತು ತಾನೂ ಹುಲ್ಲು ಮೇಯುತ್ತಿತ್ತು ನಾಯಿಗಳನ್ನು ಕಂಡರೆ ಬೆದರುತ್ತಿತ್ತು ಸಂಪೂರ್ಣವಾಗಿ ಹುಲಿ 'ಕುರಿ' ಯಾಗಿತ್ತು ಒಂದು ದಿನ, ನದಿಗೆ ನೀರು ಕುಡಿಯಹೋದ ಅದು ತನ್ನ ರೂವ ಕಂಡು, ತಾನು ತನ್ನ ಜೊತೆಗಾರರಂತಿಲ್ಲ' ಎಂದುಕೊಳ್ಳುವಾಗಲೇ, ನದಿಯ ಆಚೆ ತನ್ನಂತೆಯೇ ಇರುವ ದೊಡ್ಡ ಹುಲಿಯೊಂದನ್ನು ಕಂಡಿತು ಅದರ ಗಾಂಭೀರ್ಯ, ಹಾವಭಾವ, ನಡಿಗೆ ಎಲ್ಲ ನೋಡಿತು ಅದರ ಮೋಡದ ಗುಡುಗಿನಂತಿರುವ ಗರ್ಜನೆ ಕೇಳಿತು ಅಚ್ಚರಿಯಾಗಿ, ಅದರಂತೆಯೇ ತಾನೂ ಗರ್ಜಿಸಿತು ಏನಚ್ಚರಿ! ತಾನೂ ಆ ಹುಲಿಯಂತೆ ಗರ್ಜಿಸಬಲ್ಲೆ! ಮತ್ತೆ ಮತ್ತೆ ಗರ್ಜಿಸಿತು ಅರಣ್ಯವೆಲ್ಲ ಪ್ರತಿಧ್ವನಿಸುವ ತನ್ನ ಗರ್ಜನೆ ಕೇಳಿ ತಾನೇ ಪುಳಕಗೊಂಡಿತು ಆ ಹುಲಿ ತಾನೂ 'ಹುಲಿ' ಎಂಬುದನ್ನು ಮನಗಂಡು ಕುರಿಗಳ ಮಂದೆ ಬಿಟ್ಟು ಕಾಡಿನತ್ತನಾಗಿತು ನಮದೂ 'ಕುರಿ'ಯಾದ ಹುಲಿಯ ಕತೆಯೇ? ಈ ಸಂನಾರದ ಭೌತವಸ್ತುಗಳ ನಡುವೆ ಬೆರೆತು ನಾವು ನಮ್ಮನ್ನೇ ತಿಳಿದಿಲ್ಲ 'ನಮ್ಮತನ' ಕಳೆದುಕೊಂಡಿದ್ದೇವೆ ಅಜ್ಞಾನದಿಂದ 'ಮೇ ಮೇ | (ನನ್ನದು ನನಗೆ ) ಎಂದೆಲ್ಲ ಮಮಕಾರ ಬೆಳೆಸಿಕೊಂಡಿದ್ದೇವೆ ನಮ್ಮ ನಡೆ-ನುಡಿಗಳಲ್ಲೆಲ್ಲ ಜಡತೆ ತುಂಬಿ ಹೋಗಿದೆ