ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದೇಶದ ಕಧೆಗಳು 61 ple ಲೋಕಾಃ ಸಮಸ್ತಾಃ ಸುಖಿನೋ ಭವಂತು ಗುರುಗಳು ಶಿಷ್ಯನಿಗೆ ಹೇಳಿದರು * ಲೋಕಾಃ ಸಮಸ್ತಾಃ ಸುಖಿನೋ ಭವಂತು “ಜಗದೆಲ್ಲ ಜನರು ಸುಖವಾಗಿರಲಿ' ಇದು ನಮ್ಮ ಮನದ ಕಾಮನೆಯಾಗಿರಬೇಕು ಶಿಷ್ಯ ಕೇಳಿದ 'ಗುರುಗಳೆ! 'ನಜ್ಜನರು ಸುಖವಾಗಿರಲಿ' ಎನ್ನುವುದೇನೋ ಸರಿ? ಆದರೆ, ದುರ್ಜನರಿಗೂ ಹಾಗೆಂದೇ ಬಯಸುವುದು ಸರಿಯೆ?” ಗುರುಗಳು ನಂತರ ಉತ್ತರ ನೀಡುವುದಾಗಿ ತಿಳಿಸಿ ಸುಮ್ಮನಾದರು ಗುರು- ಶಿಷ್ಯರಿಬ್ಬರೂ ನಡೆಯುತ್ತ ದಾರಿಯಲ್ಲಿ ಸಾಗುತ್ತಿದ್ದರು ಕತ್ತಲಾಗುತ್ತಿತ್ತು ಗುರುಗಳ ಕೈಯಲ್ಲಿದ್ದ ರತ್ನಗಳ ಗಂಟೊಂದು ಕೆಳಗೆ ಬಿತ್ತು ರತ್ನಗಳೆಲ್ಲ ಚೆಲ್ಲಾಪಿಲ್ಲಿಯಾದವು ಶಿಷ್ಯ ತಕ್ಷಣ ಕೆಳಗಿದ್ದ ಕಲ್ಲು-ಮಣ್ಣನ್ನೆಲ್ಲ ಹೆಕ್ಕಿ ಉಡಿಯಲ್ಲಿ ತುಂಬಿಕೊಂಡ ಗುರುಗಳು ಕೇಳಿದರು “ಅಯ್ಯಾ! ರತ್ನಗಳನ್ನು ಮಾತ್ರ ಆರಿಸದೇ, ಕಲ್ಲು-ಮಣ್ಣನ್ನೆಲ್ಲ ಏಕೆ ತುಂಬಿಕೊಂಡೆ?” ಶಿಷ್ಯ ಉತ್ತರಿಸಿದ "ಗುರುಗಳೇ! ಈಗ ಕತ್ತಲೆಯಾಗಿದೆ ರತ್ನಗಳನ್ನು ಮಾತ್ರ ಆರಿಸುವುದು ಕಷ್ಟ ಆದುದರಿಂದ ಈಗ ಎಲ್ಲ ತುಂಬಿಕೊಂಡು, ನಾಳೆ ಬೆಳಕಿನಲ್ಲಿ ಎಲ್ಲ ರತ್ನಗಳನ್ನು ಆರಿಸಿದರಾಯ್ತು ” ಎಂದ ಹಾಗೆಯೇ ನೋಡು ನಮಗೆ ಸಜ್ಜನರಾರು, ದುರ್ಜನರಾರು ಎಂದು ಗುರುತಿಸಲು ಸಾಧ್ಯವಿಲ್ಲ ಆದ್ದರಿಂದ ಎಲ್ಲರಿಗೂ ಸುಖವಾಗಲಿ' ಎಂದೇ ಹರನಬೇಕು ಅಲ್ಲವೇ?” ಗುರುಗಳು ಉತ್ತರಿಸಿದರು 'ಸರ್ವೆ ಜನಾಃ ಸುಖಿನೋ ಭವಂತು