ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

62 ನಂದೇಶದ ಕಧೆಗಳು ಕಲಿಯ ಸಹಾಯ ಅವನು ನಿಷ್ಠಾವಂತ ಕರ್ಮರ ಬ್ರಾಹ್ಮಣ ನಿತ್ಯಕರ್ಮಗಳ ಆಚರಣೆಯಲ್ಲಿ ಅವನೆಂದೂ ತಪ್ಪಿಲ್ಲ, ಎಡವಿಲ್ಲ ಸಮಯಕ್ಕೆ ಸರಿಯಾಗಿ, ಸರಿಯಾದ ರೀತಿಯಲ್ಲಿ ಅವನು ತನ್ನ ಕರ್ತವ್ಯ-ಕರ್ಮಗಳನ್ನು ವರಿವಾಲಿಸುತ್ತಿದ್ದ ಹೀಗೆಯೇ ಒಂದು ದಿನ ಮಧ್ಯಾಹ್ನ ಮಲಗಿದ ಅವನಿಗೆ ಎಚ್ಚರವೇ ಇಲ್ಲ ಗಾಢವಾದ ನಿದ್ದೆ! ಸಂಜೆಯಾಯಿತು ಸಂಧ್ಯಾವಂದನೆಯ ಸಮಯ “ಏಳಯ್ಯಾ! ಸಂಧ್ಯಾವಂದನೆಯ ಸಮಯ ಮೀರುತ್ತದೆ' ಎನ್ನುವ ದನಿಗೆ ಅವನಿಗೆ ಎಚ್ಚರವಾಯಿತು ತನ್ನನ್ನು ಇಷ್ಟೊಂದು ಅಭಿಮಾನದಿಂದ ಎಬ್ಬಿಸಿದವರು ಯಾರಿರಬಹುದೆಂದು ಕುತೂಹಲದಿಂದ ಆ ಬ್ರಾಹ್ಮಣ ಅತ್ತಿತ್ತ ನೋಡಿದ ಪಕ್ಕದಲ್ಲೇ ನಿಂತಿದೆ ಒಂದು ಕಪ್ಪಗಿನ ಆಕೃತಿ ಯಾರೆಂದು ವಿಚಾರಿಸಿದಾಗ ತಿಳಿಯಿತು ಅವನು ಕಲಿ ವುರುಷ ! ಬ್ರಾಹ್ಮಣನಿಗೆ ಅಚ್ಚರಿಯೋ ಅಚ್ಚರಿ! “ಧರ್ಮ-ಕರ್ಮಗಳ ಆಚರಣೆಗೆ ತಡೆಯನ್ನೊಡ್ಡುವ ನೀನು ನನ್ನನ್ನೇಕೆ ಎಬ್ಬಿಸಿದೆ? ಸಂಧ್ಯಾವಂದನೆ ವೂರೈಸಲು ಏಕೆ ಪ್ರೇರಿಸುತ್ತಿರುವಿ?” ಬ್ರಾಹ್ಮಣ ಕೇಳಿದ “ಅಯ್ಯೋ ಬ್ರಾಹ್ಮಣ! ಈಗ ಸಂಧ್ಯಾಸಮಯದಲ್ಲಿ ನಿನ್ನನ್ನು ಎಬ್ಬಿಸದೇ ಬಿಟ್ಟರೆ, ಮತ್ತೆ ನಂತರ ತಡವಾಗಿ ಎದ್ದ ನೀನು ಸಮಯ ಮೀರಿ ಹೋದುದಕ್ಕೆ ಪಶ್ಚಾತ್ತಾಪ ಪಡುತ್ತೀ ಇದರಿಂದ ನಿನಗೆ ನಿತ್ಯದ ಕರ್ಮಾಚರಣೆಗಿಂತಲೂ ಹೆಚ್ಚಿನ ವುಣ್ಯ ಲಭಿಸುತ್ತದೆ ನಿನ್ನನ್ನು ಎಬ್ಬಿಸಿದರೆ, ನಿನಗೆ ನಂಧ್ಯಾವಂದನೆಯ ಅನುಷ್ಠಾನದಿಂದ ಬರುವ ವುಣ್ಯ ಮಾತ್ರ ಬರುತ್ತದೆ ಅಲ್ಲವೇ? ಅದಕ್ಕೆ ನಿನಗೆ ಹೆಚ್ಚಿನ ವುಣ್ಯ ಬರದಿರಲಿ ಎಂದು ತನ್ನ ಉದ್ದೇಶ' ಕಲಿ ತನ್ನ ಕಾರ್ಯ ನಮರ್ಧಿಸಿಕೊಂಡ ಇದು ಕಾಲ್ಪನಿಕ ಕತೆ ಆದರೆ, 'ವಶ್ಚಾತಾವ' ದ ಮಹತ್ವದ ಅರಿವು ಇದರಿಂದ ಆಗುತ್ತದೆ