ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು 63 ನಿಜವಾದ ಸಜ್ಜನ ಓರ್ವ ಸಾಧು ನದಿಯಲ್ಲಿ ಸ್ನಾನ ಮಾಡುತ್ತಿದ್ದ ನದಿಯ ದಡದ ನೀರಿನಲ್ಲಿ ಚೇಲೊಂದು ನೀರಿಗೆ ಸಿಲುಕಿ ಹೊರಗೆ ಬರಲಾಗದೇ ಒದ್ದಾಡುತ್ತಿತ್ತು ನಾಧುವಿಗೆ ಕರುಣೆ ಉಕ್ಕಿತು ಆ ಚೇಳನ್ನು ಹಿಡಿದು ಮೇಲೆತ್ತಿದ ತಕ್ಷಣ ಚೇಳು ಅವನ ಕೈಗೆ ಕುಟುಕಿತು ನೋವಿನಿಂದ ಚೇಳನ್ನು ಕೆಳಗೆ ಬಿಟ್ಟ ಮತ್ತೆ ಚೇಳು ನೀರಿನಲ್ಲಿ ಬಿದ್ದು ಚಡವಡಿಸತೊಡಗಿತು ನಾಧು ಕರುಣೆಯಿಂದ ಮತ್ತೆ ಆ ಚೇಳನ್ನು ಮೇಲಕ್ಕೆತ್ತಿದ ಚೇಳಿನ ಸ್ವಭಾವ ಮತ್ತೆ ಕಚ್ಚಿತು ನೋವಿನಿಂದಾಗಿ ಕೈ ತಪ್ಪಿ ಮತ್ತೆ ಚೇಳು ನೀರಿನಲ್ಲಿ ಮತ್ತೆ ಸಾಧು ಎತ್ತಲು ಪ್ರಯತ್ನಿಸಿದ ಆಗಲೂ ಹಾಗೆಯೇ ಆಯಿತು ನಾಧು ಆ ಚೇಳನ್ನು ಮೇಲೆತ್ತಲು ಪ್ರಯತ್ನಿಸುತ್ತಲೇ ಇದ್ದ ಅದನ್ನು ಕಂಡ ವ್ಯಕ್ತಿಯೋರ್ವ ತುಂಬ ಅಚ್ಚರಿಯಿಂದ ನಾಧುವಿನ ಬಳಿ ಹೋಗಿ ಕೇಳಿದ ಅದು ಕಚ್ಚುವುದನ್ನು ಬಿಡಲಾರದು , ನೀವೇಕೆ ಅದನ್ನು ಮೇಲೆತ್ತಲು ಮತ್ತೆ ಮತ್ತೆ ಪ್ರಯತ್ನಿಸುವಿರಿ? ನಾಧು ಹನನ್ನುಖನಾಗಿ ಹೇಳಿದ ಈ ಚೇಳು ಕಚ್ಚುವುದೆಂದು, ನಾನೂ ನಿರ್ದಯನಾದರೆ, ನನಗೂ, ಈ ಚೇಳಿಗೂ ಏನು ವ್ಯತ್ಯಾನ? ಕಚ್ಚುವುದು ಚೇಳಿನ ಸ್ವಭಾವವಲ್ಲವೇ? ಹಾಗೆಂದು ನಾನು ಅದನ್ನು ರಕ್ಷಿಸದೇ ಹೇಗೆ ಬಿಡಲಿ? ಹೌದು! ನಾವು ಕರ್ತವ್ಯವೆಂದು ಬಗೆದು ವರೋಪಕಾರವನ್ನು ಮಾಡುತ್ತಿರಬೇಕು ಅದಕ್ಕೆ ಪ್ರತಿಯಾಗಿ ವರರಿಂದ ಯಾವ ಪ್ರತಿಕ್ರಿಯೆಯನ್ನೂ ಬಯಸಬಾರದು ಕೆಲವೊಮ್ಮೆ ಪ್ರತಿರೋಧದ ಪ್ರತಿಕ್ರಿಯೆ ಬಂದರೂ, ಅದಕ್ಕೆ ಚಿಂತಿಸದೇ, ನಮ್ಮ ಕರ್ತವ್ಯದಲ್ಲಿ ತೊಡಗಬೇಕು ಶತ್ರುಗಳಿಗೂ ಹಿತ ಬಯಸುವವನೇ ನಿಜವಾದ ಸಜ್ಜನ !