ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದೇಶದ ಕಧೆಗಳು 65 ಒಂಟೆಯ ಬಾಯಲ್ಲಿ ದೇವರು ರಣರಣ ಬಿಸಿಲು , ನುಡುವ ಮರಳರಾಶಿ , ಮರಗಳಿಲ್ಲದ ಮರುಭೂಮಿ, ನೆರಳಿಲ್ಲದ ದಾರಿ | ನೀರಿಲ್ಲದೇ ನಿತ್ರಾಣವಾಗಿ ಮಲಗಿದ ಆ ಒಂಟೆಯ ಕಂಡು ಎಲ್ಲರೂ ಮರಗುವವರೇ ! ನೂರಾರು ಜನ ಯಾತ್ರಿಕರು ಉತ್ತರದ ಯಾತ್ರೆ ಮುಗಿಸಿ ತಮ್ಮೂರಿಗೆ ಹಿಂದಿರುಗುತ್ತಿದ್ದಾರೆ ಒಬ್ಬೊಬ್ಬರೂ ಹೆಗಲ ಮೇಲೆ ಗಂಗೆಯ ನೀರು ತುಂಬಿಸಿದ ಕೊಡಗಳನ್ನು ಹಿಡಿದಿದ್ದಾರೆ ನೀರಿಗಾಗಿ ಪರಿತಪಿಸುತ್ತ ಕಾತರಿಸುತ್ತಒದ್ದಿರುವ ಒಂಟೆಯ ಕಂಡು “ ಅಯ್ಯೋ ವಾವ ! ಎಂದು ಕನಿಕರ ತೋರಿದರೇ ಹೊರತು, ಒಂದು ಬೊಗಸೆ ನೀರು ಹನಿಸಲಿಲ್ಲ! ಒಬ್ಬ ಯಾತ್ರಿಕ ಒಂಟೆಯ ಸ್ಥಿತಿ ನೋಡಿದ ಹಿಂದು ಮುಂದು ನೋಡದೆ ತನ್ನ ಗಂಗಾಕಲಶವನ್ನು ಒಡೆದ ಒಂಟೆಯ ಬಾಯಿಗೆ ನೀರು ಬಡಿಸಿದ | ಸಹಯಾತ್ರಿಕರು ಅವನ ಈ ಕಾರ್ಯ ನೋಡಿ ಹಣೆ ಚಚಿಕೊಂಡರು ಕಷ್ಟಪಟ್ಟು ತಂದ ಗಂಗೆಯ ನೀರನ್ನು ದಕ್ಷಿಣದ ರಾಮೇಶ್ವರನಿಗೆ ಅಭಿಷೇಕ ಮಾಡಿ ಪುಣ್ಯ ಗಳಿಸದೇ, ಒಂಟೆಯ ಬಾಯಿಗೆ ಹೊಯ್ದು ವ್ಯರ್ಥ ಮಾಡಿದ! ಎಂಧ ದಡ್ಡ !! ಎಂದುಕೊಂಡರು ಒಂಟೆಗೆ ನೀರು ಹಾಕಿಸಿದ ಆ ಯಾತ್ರಿಕ, ಒಂಟೆಯ ಒಡಲಲ್ಲೇ ರಾಮೇಶ್ವರವನ್ನು ಕಂಡ ! ಪರಮೇಶ್ವರ ಅಲ್ಲಿಯೇ ಇದ್ದು ಆ ಭಕ್ತನ ಸೇವೆ ಸ್ವೀಕರಿಸಿ, ಅನುಗ್ರಹಿಸಿದ !! ದೇವರು ಬೇರೆಲ್ಲೂ ಇಲ್ಲ, ನಮ್ಮ ಕಣ್ಣೆದುರೇ, ಎಲ್ಲ ಪ್ರಾಣಿಗಳಲ್ಲಿ ಅಂತರ್ಯಾಮಿಯಾಗಿ ನೆಲೆಸಿದ್ದಾನೆ ನಾವು ಪ್ರಾಣಿಗಳಲ್ಲಿ ತೋರುವ ಪ್ರೀತಿ- ದಯೆಯಿಂದ ಅವನು ಪ್ರೀತನಾಗುತ್ತಾನೆ

  • ಪ್ರಾಣ್ಯುಪಕಾರೇಣ ಪ್ರೀತೋ ಭವತಿ ಕೇಶವಃ '