ಈ ಪುಟವನ್ನು ಪ್ರಕಟಿಸಲಾಗಿದೆ

7

ಕೊರಡಿಯ ಪ್ರಕಾಶವು ಬಹಳವಾಗಿದೆ! ಸುವರ್ಣದ ರಾಶಿಯಲ್ಲವೂ ಮತ್ತಷ್ಟು ಹೆಚ್ಚಾಗಿ ಥಳಥಳಿಸುತ್ತಿದೆ! ಒಂದೊಂದು ಮೂಲೆಯಲ್ಲಿಯೂ ಬೆಳಕು ಬಿದ್ದು ಪ್ರಕಾಶಮಾನವಾಗಿದೆ! ಈತನು ನಕ್ಕರೆ ಕೂಡಲೆ ಉರಿಯುವ ಕೊಳ್ಳಿಯಂತೆ ಪ್ರಕಾಶವು ಮತ್ತಷ್ಟು ಹೆಚ್ಚುವುದು!

ಇದನ್ನು ನೋಡಿ ಸುವರ್ಣಶೇಖರನು ದಿಗ್ಭ್ರಮೆ ಹಿಡಿದವನಾದನು ಬಾಗಿಲನ್ನು ಗಟ್ಟಿಯಾಗಿ ಹಾಕಿ ಬೀಗಹಾಕಿದ್ದೇನೆ. ಮನುಷ್ಯನಿಗೆ ಎಷ್ಟು ಮಾತ್ರಕ್ಕೂ ಬಾಗಿಲನ್ನು ತಳ್ಳಿ ಒಳಗೆ ಬರುವುದಕ್ಕೆ ಸಾಧ್ಯವಾಗುವಂತಿಲ್ಲ. ಹೀಗಿರುವಾಗ ಬಂದಿರುವ ಈ ಮಹಾತ್ಮನು ದೇವಾಂಶ ಸಂಭೂತನೇ ಆಗಿರಬೇಕು. ಈತನು ಇಷ್ಟೊಂದು ಶಾಂತಚಿತ್ತನಾಗಿಯೂ, ಹಸನ್ಮುಖಿಯಾಗಿಯೂ ಇರುವಾಗ ಈತನೇನೂ ನನಗೆ ಕೇಡನ್ನು ಖಂಡಿತವಾಗಿ ಮಾಡ ಲಾರನೆಂದು ಸುವರ್ಣಶೇಖರನ ಕಡೆಗೆ ಧೈರ್ಯ ತಂದುಕೊಂಡನು.

ಕೊರಡಿಯ ನಾಲ್ಕೂ ಕಡೆಗೂ ನೋಡುತ್ತ ಮಂದಹಾಸಯುಕ್ತನಾಗಿರುವ ಆ ದೈವಾಂಶ ಪುರುಷನು ಇವನನ್ನು ಕುರಿತು, "ಏನಯ್ಯಾ, ಸುವರ್ಣಶೇಖರನೆ, ನೀನು ಒಳ್ಳೆಯ ಐಶ್ವರ್ಯವಂತನು. ನಿನ್ನಂತೆ ಇಷ್ಟೊಂದು ಐಶ್ವರ್ಯವನ್ನು ಶೇಖರಿಸಿ ಇಟ್ಟುಕೊಂಡಿರುವ ಪುರುಷನು ಇನ್ನೊಬ್ಬನಿರಲಾರನು ಎಂದನು". ಅದಕ್ಕೆ ಸುವರ್ಣಶೇಖರನು "ಏನೋ ಶೇಖರಿಸಿದೇನೆ, ಆದರೂ ಅದೇನೂ ಬಹಳವಲ್ಲ. ಅದನ್ನು ಕೂಡಿಡುವದಕ್ಕೆ ನನ್ನ ಜೀವಮಾನವೆಲ್ಲಾ ಹಿಡಿದಿದೆ. ಏನೋ ಒಂದು ಸಾವಿರ ವರ್ಷವಾದರೂ ಬದುಕಿದ್ದರೆ ಇದ್ದುದರಲ್ಲಿ ಸ್ವಲ್ಪ ಐಶ್ವರ್ಯ ಸಂಪಾದನೆ ಮಾಡಬಹುದು," ಎಂದು ಅಸಮಾಧಾನದಿಂದ ಉತ್ತರಕೊಟ್ಟನು. "ಓಹೋ! ಹಾಗಾದರೆ ನಿನಗೆ ಇನ್ನೂ ತೃಪ್ತಿಯಿಲ್ಲ," ಎಂದು ಆತನು ಆಶ್ಚರ್ಯಪಡಲು, ತೃಪ್ತಿಯೆಲ್ಲಿಯದು? ಸರಿ," ಎಂದು