5
ಕ್ಕೊಂದು ತಗಲುವುದರಿಂದ ಹುಟ್ಟುವ ಶಬ್ದ ಹೊರತು ಮತ್ತಾವುದೂ ಬೇಕಾಗಿರಲಿಲ್ಲ.
ಆಶಾಪಾಶಕ್ಕೆ ಸಿಕ್ಕಿದ ಸುವರ್ಣಶೇಖರನಿಗೆ ಮನಸ್ಸಿನ ಸ್ಥಿತಿಯೇ ಬದಲಾಯಿಸಿ ಹೋಯಿತು. ಚಿನ್ನವನ್ನು ವಿನಾ ಮತ್ತಾವುದನ್ನಾದರೂ ಮುಟ್ಟಬೇಕೆಂದರು ಅವನಿಗೆ ಮನಸ್ಸು ಬರುತ್ತಿರಲಿಲ್ಲ. ಅಂತಹ ಪದಾರ್ಥಗಳನ್ನು ತಲೆಯೆತ್ತಿ ನೋಡಬೇಕೆಂದರೂ ಅವನಿಗೆ ಜುಗುಪ್ಪೆಯಾಗುತ್ತಿದ್ದಿತು. ಈ ಬಗೆಯ ಹುಚ್ಚು ಹಿಡಿದಮೊದಲು ಸುವರ್ಣಶೇಖರನು ತನ್ನ ಅರಮನೆಯ ನೆಲಮಾಳಿಗೆಯಲ್ಲಿದ್ದ ಗಾಢಾಂಧಕಾರವಾದ ಕೊರಡಿಯಲ್ಲಿಯೇ ಹೆಚ್ಚು ಕಾಲವನ್ನು ಕಳೆಯುತ್ತಿದ್ದನು. ಆತನ ಐಶ್ವರ್ಯವೆಲ್ಲವೂ ಆ ಕೊರಡಿಯಲ್ಲಿದ್ದಿತು. ಸಂತೋಷಪಡಬೇಕೆಂದು ತನಗೆ ತೋರಿದಾಗಲೆಲ್ಲಾ ಆ ಕೊರಡಿಗೆ ಹೋಗಿ, ಪಟ್ಟಿಗೆಗಳ ಬಾಗಿಲುಗಳನ್ನು ತೆಗೆದು, ಸುವರ್ಣದ ನಾಣ್ಯಗಳನ್ನೆಲ್ಲಾ ರಾಶಿಹಾಕಿಕೊಂಡು ಅದರಲ್ಲಿಯೇ ತನ್ನ ಕಯ್ಗಳನ್ನು ಆಡಿಸುತ್ತಿದ್ದನು. ಇದೂ ಅಲ್ಲದೆ, ತನ್ನ ಕಯ್ಗೆ ಸಿಕ್ಕಿದ ಚಿನ್ನದ ಪ್ರತಿಯೊಂದು ಪದಾರ್ಥವನ್ನೂ ಕೂಠಡಿಯೊಳಕ್ಕೆ ಒಂದು ರಂಧ್ರಮೂಲಕ ಬೀಳುತ್ತಿದ್ದ ಸೂರ್ಯನ ರಶ್ಮಿಯ ಬೆಳಕಿಗೆ ಪದೇ ಪದೇ ತಂದು ಹಿಡಿದು ಅದರ ಪ್ರಕಾಶವನ್ನು ನೋಡಿ ಆನಂದಿಸುತ್ತಿದ್ದನು. ಇಂತಹ ಆನಂದಕ್ಕೆ ಕಾರಣವಾಗಿದ್ದ ಸೂರ್ಯ ರಶ್ಮಿಯನ್ನು ಮಾತ್ರ ಅವನು ಶ್ಲಾಘನೆ ಮಾಡುತ್ತಿದ್ದನು. ಏಕೆಂದರೆ, ಇದಿಲ್ಲದಿದ್ದರೆ ಅವನ ಸುವರ್ಣಕ್ಕೆ ಹೆಚ್ಚಿನ ಕಾಂತಿ ಇರುತ್ತಿರಲಿಲ್ಲ. ಇದಾದಮೇಲೆ ಚೀಲದಲ್ಲಿರುವ ನಾಣ್ಯಗಳನ್ನು ಕೆಳಕ್ಕೆ ಸುರಿದು ಸುಮ್ಮನೆ ಎಣಿಸುತ್ತಿದ್ದನು. ಇದೂ ಬೇಜಾರಾದರೆ ಒಂದು ಚಿನ್ನದ ಶಲಾಕೆಯನ್ನು ತೆಗೆದುಕೊಂಡು ಮೇಲಕ್ಕೆ ಎಸೆಯುವುದು, ಹಿಡಿದುಕೊಳ್ಳುವುದು, ಪುನಃ ಎಸೆಯುವುದು, ಹಿಡಿದು ಕೊಳ್ಳುವುದು-ಹೀಗೆ ಮಾಡುತ್ತಿದ್ದನು, ಅದೂ ಸಾಕಾದರೆ