ತಂತ್ರ - ಅದನ್ನೇಕೆ ಕೇಳುವಿರಿ? ಬಹು ಅಂತರಂಗ; ಅನರ್ಥಕಾರಿ'
ಗಿರಿ - ಕುತೂಹಲದಿಂದ ಅದೇನು? ಹೇಳಲಾಗದಷ್ಟು ಗುಟ್ಟೇ?
ತಂತ್ರ - ನಿಮ್ಮಲ್ಲಿ ಹೇಳಲಾಗದುದೇನೂ ಅಲ್ಲ : ಆದರೂ ಬಲು ಗುಟ್ಟಾಗಿರತಕ್ಕುದು.
ಗಿರಿ - ನನ್ನ ವಿಷಯವು ನಿನಗಿನ್ನೂ ತಿಳಿಯದೆ? ಹೇಳು__
ತಂತ್ರ - ಅದನ್ನು ತಾವು ಹೊರಡಿಸುವುದಿಲ್ಲವೆಂದು ಮಾತು ಕೊಟ್ಟರೆ ಹೇಳುವೆನು.
ಗಿರಿ - ಇಲ್ಲವಪ್ಪ! ನನ್ನಾಣೆ | ಯಾರಿಗೂ ಹೇಳುವುದಿಲ್ಲ.
ತಂತ್ರ - ಸುಶೀಲೆ ತಮಗೇನಾಗಬೇಕು?
ಗಿರಿ - ಆ ದುರಹಂಕಾರದ ಹುಡಗಿಗೂ ನನಗೂ ಏನೂ ಸಂಬಂಧವಿಲ್ಲ. ಅವಳ ತಾಯಿ, ನನ್ನ ಚಿಕ್ಕಂದಿನ ಸಂಗಾತಿ. ಅವಳ ಅತ್ತೆಯೂ ನನಗೆ ಬೇಕಾದವಳೇ ಆಗಿದ್ದಳು.
ತಂತ್ರ - ಅವಳ ನಡೆನುಡಿ ವಿಚಾರವೇನಾದರೂ ತಮಗೆ ತಿಳಿದಿದೆಯೋ!
ಗಿರಿ - ಯಾರು ಬಲ್ಲರು! ನೋಡುವುದಕ್ಕೇನೋ ಬಲು ಒಳ್ಳೆಯವಳಾಗಿ ಕಾಣುವಳು. ಓದು ಬರಹ ಬಲ್ಲ ಈ ಕಾಲದ ಹುಡುಗಿಯರನ್ನು ನಂಬುವುದು ಹೇಗೆ? ಯಾವಾಗ ನೋಡಿದರೂ ಪುಸ್ತಕವನ್ನು ಹಿಡಿದಿರುವಳು. ಒಳ್ಳೊಳ್ಳೆಯ ಮಾತುಗಳನ್ನಾಡುವಳು.
ತಂತ್ರ - ನಿಜ, ಹಾಗೆಯೇ ಮಾಡಬೇಕಷ್ಟೆ! ಹತ್ತಿಯಹಣ್ಣು ಮೇಲೆ ನೋಡಲಿಕ್ಕೆ ಅಂದವಾಗಿಯೇ ಇರುವುದು, ಆದರೇನು? ಸುಶೀಲೆಯ ಹೆಸರೂ ಚೆನ್ನಾಗಿರುವುದು. ನಡತೆಯಲ್ಲಿ ಮಾತ್ರವೇ?
...................