ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೨೭

ಗಿರಿ - ಗಿರಿಯಮ್ಮನ ಮುಖದಲ್ಲಿ ಉತ್ಸಾಹವು ಹೆಚ್ಚಿತು. ಆತುರದಿಂದ, 'ಏನು? ನಡತೆಯಲ್ಲಿ ಕುಂದೇನು?'

ತಂತ್ರ - ಮತ್ತೇನು? ಕುಲಟಾವರ್ತನವೊಂದೇ ಸಾಲದೆ?

ಗಿರಿ - ಸಂಭ್ರಮದಿಂದ, - 'ನಿನಗೆ ಹೇಗೆ ತಿಳಿಯಿತು!

ತಂತ್ರ - (ಕಳ್ಳನೆಂದಿದ್ದರೂ ಹೊರಬೀಳುವನಲ್ಲವೆ?) ನನ್ನ ಚಿಂತೆಗೆ ಕಾರಣವಾದರೂ ಮತ್ತಾವುದು?

ಗಿರಿ - ಹೇಗೆ? ನೀನೇನಾದರೂ ಅವಳ ಮನೆಗೆ ಹೋಗಿದ್ದೆಯೊ? ವಿಶೇಷವೇನು?

ತಂತ್ರ - ವಿನೋದನನ್ನು ನೋಡಬೇಕೆಂದು ಹೋಗಿದ್ದೆನು, ಅವನು ಮನೆಯಲ್ಲಿರಲಿಲ್ಲ.

ಗಿರಿ - ಅವಳೊಬ್ಬಳೇ ಇದ್ದಳೇನು? ಏನಾಯ್ತು?

ತಂತ್ರ - ತುಟಿಯನ್ನು ತುದಿನಾಲಿಗೆಯಿಂದ ನೆಕ್ಕುತ್ತೆ, 'ನಡೆದದೆಲ್ಲವನ್ನೂ ಹೇಳಲು ನನಗೆ ಹೆದರಿಕೆಯಾಗುವುದು. ನೀವು ಯಾರೊಡನಯೂ,..................

ಗಿರಿ - ತಂತ್ರನಾಥ! ನಾನು ಯಾರೊಡನೆಯಾದರೂ, ಎಂದಿಗಾದರೂ ಹೇಳುವೆನೇನು?

ತಂತ್ರ - ಹಜಾರಕ್ಕೆ ಹೋದೆನು. ನನ್ನನ್ನು ನೋಡಿದೊಡನೆಯೇ ಕೈ ಹಿಡಿದು ಒಳಕ್ಕೆ ಕರೆದುಕೊಂಡುಹೋದಳು, ಆ ಬಳಿಕ........

ಗಿರಿ - ಓದಿ ಕೆಟ್ಟಳು! ತಿಳಿಗೇಡುವಿದ್ಯೆ!! ಆಮೇಲೆ?

ತಂತ್ರ - ಅತ್ತಿತ್ತ ನೋಡಿ__ ತೊದಲು ನಾಲಿಗೆಯಿಂದ,__ ಆಮೇಲೇನು? ನಿನ್ನನ್ನೇ ಮದುವೆಯಾಗಬೇಕೆಂಬ ಆಶೆ ನನಗೆ ಬಲವಾಗಿತ್ತು.