ದಶಮಪರಿಚ್ಛೇದ
[ನ್ಯಾಯಸ್ಥಾನ]
ಇಂದು ಮಲಯಪುರದ ಮ್ಯಾಯಸ್ಥಾನ(Court)ದಲ್ಲಿ ಧರ್ಮಾವತಾರನ (Judge) ಮುಂದೆ ಅಪರಾಧಿಗಳ ವಿಚಾರಣೆಯಾಗಬೇಕು. ಗಿರಿಯಮ್ಮ, ತಂತ್ರನಾಥ, ವಿನೋಧ ಮಯೂರಿ, ಸುಜ್ಞಾನಶರ್ಮ ಇವರ ವಿಚಾರಣೆಯೇ ಮುಖ್ಯವಾದುದು.
ಧರ್ಮಾವತಾರನ ಮುಂದೆ, ಮೊದಲು ಗಿರಿಯಮ್ಮನು ಕರೆಯಿಸಲ್ಪಟ್ಟಳು. ವಿಚಾರಕ್ಕೆ ಮೊದಲಾಯ್ತು ; ಗಿರಿಯಮ್ಮನು ಗದಗದಿಸುತ್ತೆ, ಮೆಲ್ಲನೆ- “ಸ್ವಾಮಿ ! ಧರ್ಮಾವತಾರರಾದ ಪ್ರಭುಗಳ ಮುಂದೆ ಸುಳ್ಳಾಡಲಾರೆನು” ಎಂದು ಹೇಳಿ, ತನ್ನ ಸಂಕಲ್ಪ, ತಂತ್ರನಾಥನ ಕುತಂತ್ರ, ತಾನು ವಿನೋದನಿಗೆ ತಿಳಿಸಿದ ಸಂಗತಿ, ಇವೇ ಮೊದಲಾದ ತನ್ನಿಂದ ನಡೆಯಿಸಲ್ಪಟ್ಟ ಕೃತ್ಯಗಳೆಲ್ಲವನ್ನೂ ಸ್ವಲ್ಪವೂ ವ್ಯತ್ಯಾಸವಿಲ್ಲದೆ ತಿಳಿಸಿಬಿಟ್ಟಳು.
ಆ ಬಳಿಕ ಧರ್ಮಾವತಾರನ ಮುಂದೆ ಮಯೂರಿ ಕರೆಯಿಸುಟ್ಟಳು. ವಿಚಾರಕ್ಕೆ ಮೊದಲಾಯ್ತು ; ಜಡ್ಜಿಯ (ಧರ್ಮಾವತಾರ ನ್ಯಾಯಾಧಿಕಾರಿ) ಪೃಚ್ಛೆಗೆ ಮಯೂರಿ, ಸ್ಥಿರಭಾವನೆಯಿಂದ ತನಗೆ ತಿಳಿದ ಸಂಗತಿಯೆಲ್ಲವನ್ನೂ, ಗಿರಿಯಮ್ಮ-ಸುಶೀಲೆಯರ ಸಂವಾದ ಮೊದಲ್ಗೊಂಡು, "ತಂತ್ರನಾಥನ ಆಗಮನ, ಅವನ ದುರಭಿಸಂಧಾನ ಕ್ರಮ, ವಿನೋಜನ ಆಗ್ರಹ, ಪರಿಣಾಮ, ತಾನು ಇನಸ್ಪೆಕ್ಟರನ್ನು